ಹೈದರಾಬಾದ್: ಟಾಲಿವುಡ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ದೀಪಾವಳಿ ಆಚರಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತಹ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವಿಜಯ್ ಮತ್ತು ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಬ್ಬರೂ ಅನೇಕ ಬಾರಿ ಒಂದೇ ಕಡೆ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.
ಇದೀಗ ವಿಜಯ್ ಮನೆಯಲ್ಲಿ ರಶ್ಮಿಕಾ ದೀಪಾವಳಿ ಆಚರಿಸಿರುವ ಫೋಟೋ ವೈರಲ್ ಆಗಿದೆ. ಇಬ್ಬರೂ ದೀಪಾವಳಿ ಹಬ್ಬಕ್ಕೆ ಫೋಟೋ ಪ್ರಕಟಿಸಿ ಶುಭ ಕೋರಿದ್ದರು. ಆದರೆ ಇಬ್ಬರ ಫೋಟೋದ ಹಿನ್ನಲೆಯೂ ಒಂದೇ ಆಗಿದ್ದು ಇದನ್ನು ಗಮನಿಸಿದ ನೆಟ್ಟಿಗರು ರಶ್ಮಿಕಾ ದೀಪಾವಳಿ ಹಬ್ಬವನ್ನು ವಿಜಯ್ ಮನೆಯಲ್ಲಿಯೇ ಆಚರಿಸಿದ್ದಾರೆ ಎಂದಿದ್ದಾರೆ.