Publish Date: Thu, 09 Nov 2023 (16:30 IST)
Updated Date: Thu, 09 Nov 2023 (16:32 IST)
ಚೆನ್ನೈ: ಡಿಸೆಂಬರ್ 12 ಕ್ಕೆ ಸೂಪರ್ ಸ್ಟಾರ್ ರಜನೀಕಾಂತ್ ಹುಟ್ಟುಹಬ್ಬವಿದೆ. ಆದರೆ ಒಂದು ತಿಂಗಳ ಮುಂಚಿತವಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.
ಡಿಸೆಂಬರ್ 12 ಕ್ಕೆ ರಜನಿ ಹುಟ್ಟುಹಬ್ಬದ ನಿಮಿತ್ತ ಅವರು ನಟಿಸಿರುವ ಲಾಲ್ ಸಲಾಂ ಸಿನಿಮಾ ಟೀಸರ್ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ರಜನಿ ಪುತ್ರಿ ಐಶ್ವರ್ಯಾ ನಿರ್ದೇಶಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಲಾಲ್ ಸಲಾಂ ಸಿನಿಮಾದಲ್ಲಿ ರಜನಿ ವಿಭಿನ್ನ ಲುಕ್ ರಿವೀಲ್ ಆಗಿತ್ತು. ಲುಕ್ ನೋಡಿದರೆ ಡಾನ್ ರೀತಿಯ ಪಾತ್ರ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಹೀಗಾಗಿ ಚಿತ್ರದ ಬಗ್ಗೆ ರಜನಿ ಫ್ಯಾನ್ಸ್ ಗೆ ಕುತೂಹಲವಿದೆ.