Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾಗೆ ಚೆನ್ನೈ ಪ್ರವಾಹದ ಕಾಟ

ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾಗೆ ಚೆನ್ನೈ ಪ್ರವಾಹದ ಕಾಟ
ಬೆಂಗಳೂರು , ಸೋಮವಾರ, 11 ಡಿಸೆಂಬರ್ 2023 (10:20 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾದ ಶೂಟಿಂಗ್ ತಮಿಳುನಾಡಿನಲ್ಲಿ ವಿಶೇಷ ಸೆಟ್ ನಲ್ಲಿ ನಡೆಯುತ್ತಿದೆ.

ಆದರೆ ಶೂಟಿಂಗ್ ಗೆ ಈಗ ಚೆನ್ನೈ ಪ್ರವಾಹ ಅಡ್ಡಿಯಾಗಿದೆ. ಇತ್ತೀಚೆಗೆ ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಜಲಪ್ರಳಯವಾಗಿತ್ತು. ಸಾಕಷ್ಟು ಜನ ಆಸ್ತಿ ಪಾಸ್ತಿ ಕಳೆದುಕೊಂಡಿದ್ದರು.

ಇದೀಗ ಮ್ಯಾಕ್ಸ್ ಸಿನಿಮಾ ಶೂಟಿಂಗ್ ಗೂ ತಟ್ಟಿದೆ. ಮ್ಯಾಕ್ಸ್ ಸಿನಿಮಾ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳ ಶೂಟಿಂಗ್ ಬಾಕಿಯಿತ್ತು. ಆದರೆ ಪ್ರವಾಹ ಸದೃಶ ವಾತಾವರಣದಿಂದ ಶೂಟಿಂಗ್ ಗೆ ಅಡ್ಡಿಯಾಗಿದೆ.

ಹೀಗಾಗಿ ಜನವರಿ ಅಂತ್ಯಕ್ಕೆ ಚಿತ್ರದ ಚಿತ್ರೀಕರಣ ಮುಂದುವರಿಯುವ ಸಾಧ‍್ಯತೆಯಿದೆ. ಹೀಗಾಗಿ ಮ್ಯಾಕ್ಸ್ ಸಿನಿಮಾ ರಿಲೀಸ್ ದಿನಾಂಕವೂ ಮತ್ತಷ್ಟು ಮುಂದೂಡಿಕೆಯಾಗಬಹುದು. ಇದಕ್ಕೆ ಮೊದಲು ಈ ಸಿನಿಮಾವನ್ನು ಫೆಬ್ರವರಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್ ಎರಡನೇ ಟ್ರೈಲರ್ ಲಾಂಚ್ ಗೆ ಅದ್ಧೂರಿ ಈವೆಂಟ್