ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಮುಂದಿನ ಸಿನಿಮಾ ಟಾಕ್ಸಿಕ್ ಗೆ ಮಹಿಳಾ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇಂತಹ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಮಹಿಳಾ ನಿರ್ದೇಶಕಿ ಎನ್ನುವುದು ವಿಶೇಷವೇ. ಮಲಯಾಳಂ ಮೂಲದ ನಟಿ ಕಮ್ ನಿರ್ದೇಶಕಿ ಗೀತು ಮೋಹನ್ ದಾಸ್ ಬಗ್ಗೆ ತಿಳಿದುಕೊಳ್ಳೋಣ.
42 ವರ್ಷದ ಗೀತು ಮೋಹನ್ ದಾಸ್ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. ಆಗ ಅವರಿಗೆ ಕೇವಲ ಐದು ವರ್ಷ. ಮೋಹನ್ ಲಾಲ್ ನಂತಹ ದಿಗ್ಗಜ ನಟನೊಂದಿಗೆ ತೆರೆ ಹಂಚಿ ಸೈ ಎನಿಸಿಕೊಂಡವರು. 2004 ರಲ್ಲಿ ಅಗಲೆ ಎನ್ನುವ ಸಿನಿಮಾದ ನಟನೆಗೆ ಕೇರಳ ರಾಜ್ಯ ಚಲನಚಿತ್ರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು. ಇದು ಅವರ ಚಿತ್ರ ಜೀವನಕ್ಕೆ ಬ್ರೇಕ್ ಕೊಟ್ಟ ಸಿನಿಮಾ.
2009 ರಲ್ಲಿ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ ಗೀತು ಕೇಳ್ಕುನ್ನುಂಡೋ ಸಿನಿಮಾ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟರು. ಈ ಸಿನಿಮಾ ಅಂತಾರಾಷ್ಟ್ರೀಯ ಚಲನಚಿತ್ಸೋವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಯನ್ನೂ ಪಡೆದುಕೊಂಡಿತ್ತು. ಗೀತು ನಿರ್ದೇಶಿಸಿದ ಮೊದಲ ಕಮರ್ಷಿಯಲ್ ಸಿನಿಮಾ ಲೈಯರ್ಸ್ ಡೈಸ್. ಈ ಸಿನಿಮಾಗೆ ಅವರು ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದಲ್ಲದೆ, ಆಸ್ಕರ್ ಗೂ ಅಧಿಕೃತ ಎಂಟ್ರಿಯಾಗಿ ಸೇರಿಕೊಂಡಿತು.
2016 ರಲ್ಲಿ ಅವರ ನಿರ್ದೇಶನದ ಎರಡನೇ ಕಮರ್ಷಿಯಲ್ ಸಿನಿಮಾ ಮೂತೋನ್ ಬಂದಿತ್ತು. ಇದಾದ ಬಳಿಕ ಈಗ ಮೂರನೇ ಕಮರ್ಷಿಯಲ್ ಸಿನಿಮಾವಾಗಿ ಟಾಕ್ಸಿಕ್ ಸಿನಿಮಾಗೆ ಯಶ್ ಗೆ ಆಕ್ಷನ್ ಕಟ್ ಹೇಳುವ ಅದೃಷ್ಟ ಪಡೆದಿದ್ದಾರೆ.