ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ ನ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಇದೀಗ ಯಶ್ ಸಂಭಾವನೆ ವಿಚಾರ ಸದ್ದು ಮಾಡುತ್ತಿದೆ.
ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣಬೀರ್ ಕಪೂರ್ ನಾಯಕರಾಗಿ ರಾಮಾಯಣ ಸಿನಿಮಾ ಬಾಲಿವಡ್ ನಲ್ಲಿ ನಿರ್ಮಾಣವಾಗಲಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ಪಾತ್ರ ಮಾಡಲಿರುವುದು ಕನ್ ಫರ್ಮ್. ಆದರೆ ಯಶ್ ರಾವಣನ ಪಾತ್ರ ಮಾಡುತ್ತಾರೆ ಎಂದು ಇನ್ನೂ ಅಧಿಕೃತವಾಗಿ ಪ್ರಕಟಣೆ ಬಂದಿಲ್ಲ.
ಇತ್ತೀಚೆಗೆ ತಮ್ಮ ಸ್ನೇಹಿತನ ಜಿಮ್ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದ ರಾಕಿಂಗ್ ಸ್ಟಾರ್ ಯಶ್ ಗೆ ಬಾಲಿವುಡ್ ರಾಮಾಯಣದಲ್ಲಿ ಪಾತ್ರ ಮಾಡಲಿದ್ದೀರಾ ಎಂದು ಕೇಳಿದಾಗ ನಾನೇ ಆಗಿ ಏನನ್ನೂ ಹೇಳುವವರೆಗೂ ಯಾವುದನ್ನೂ ಅಧಿಕೃತವಾಗಿ ನಂಬಬೇಡಿ ಎಂದಿದ್ದರು.
ಆದರೂ ರಾವಣನ ಪಾತ್ರಕ್ಕೆ ಯಶ್ ಖಚಿತ ಎಂಬ ಮಾತುಬಲವಾಗಿ ಕೇಳಿಬರುತ್ತಲೇ ಇರುತ್ತದೆ. ಇದೀಗ ಯಶ್ ಈ ಸಿನಿಮಾಗೆ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಕೆಜಿಎಫ್ 2 ಸಿನಿಮಾಗೆ ಯಶ್ ತೆಗೆದುಕೊಂಡಿದ್ದು 30 ಕೋಟಿ ರೂ. ಟಾಕ್ಸಿಕ್ ಸಿನಿಮಾಗೆ 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿಯಿದೆ. ಇದೀಗ ಬಾಲಿವುಡ್ ರಾಮಾಯಣಕ್ಕೆ 150 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ಅತ್ಯಂತ ದುಬಾರಿ ಕನ್ನಡ ನಟ ಎಂಬ ದಾಖಲೆ ಮಾಡಲಿದ್ದಾರಂತೆ.