Select Your Language

Notifications

webdunia
webdunia
webdunia
webdunia

ಯಶ್ ನಿರ್ಮಾಪಕರಾಗಿರುವ ಬಾಲಿವುಡ್ ರಾಮಾಯಣ ಸಿನಿಮಾ ಬಜೆಟ್ ಕೇಳಿದ್ರೆ ಶಾಕ್ ಆಗ್ತೀರಿ

Yash Ramayan

Krishnaveni K

ಮುಂಬೈ , ಮಂಗಳವಾರ, 14 ಮೇ 2024 (13:02 IST)
ಮುಂಬೈ: ರಾಕಿಂಗ್ ಸ್ಟಾರ್ ಯಶ್ ಸಹ ನಿರ್ಮಾಪಕರಾಗಿರುವ ಬಾಲಿವುಡ್ ನ ರಾಮಾಯಣ ಸಿನಿಮಾದ ಬಜೆಟ್ ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತಾ. ಈ ಸಿನಿಮಾ ಬಜೆಟ್ ಬರೋಬ್ಬರಿ 800 ಕೋಟಿ ರೂ.ಗಳನ್ನೂ ಮೀರಲಿದೆ ಎನ್ನಲಾಗುತ್ತಿದೆ.

ರಣಬೀರ್ ಕಪೂರ್ ರಾಮನಾಗಿ ಸಾಯಿ ಪಲ್ಲವಿ ಸೀತಾದೇವಿಯಾಗಿ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಶೂಟಿಂಗ್ ಕೂಡಾ ಆರಂಭವಾಗಿದೆ. ಸಿನಿಮಾದ ಕೆಲವೊಂದು ಶೂಟಿಂಗ್ ದೃಶ್ಯಗಳು ಸೆಟ್ ನಿಂದ ಆನ್ ಲೈನ್ ನಲ್ಲಿ ಸೋರಿಕೆಯಾಗಿ ವೈರಲ್ ಆಗಿದ್ದವು.

ಇದೀಗ ಬಜೆಟ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ನಿತೀಶ್ ತಿವಾರಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಚಿತ್ರದ ಪ್ರಧಾನ ನಿರ್ಮಾಪಕರು. ರಾಕಿಂಗ್ ಸ್ಟಾರ್ ಯಶ್ ಕೂಡಾ ಚಿತ್ರಕ್ಕೆ ಸಹ ನಿರ್ಮಾಪಕನಾಗಿ ಕೈ ಜೋಡಿಸಿದ್ದಾರೆ. ಈ ಸಿನಿಮಾದ ಬಜೆಟ್ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ.

ಮೂಲಗಳ ಪ್ರಕಾರ ಸಿನಿಮಾಗೆ 835 ಕೋಟಿ ರೂ. ಬಜೆಟ್ ನಿಗದಿಯಾಗಿದೆಯಂತೆ. ಸಿನಿಮಾದಲ್ಲಿ ಸ್ಟಾರ್ ಕಲಾವಿದರ ಬಳಗವನ್ನೇ ಹಾಕಿಕೊಳ್ಳಲಾಗುತ್ತಿದೆ. ಸಿನಿಮಾಗಾಗಿ ಅದ್ಧೂರಿ ಸೆಟ್ ನಿರ್ಮಿಸಲಾಗುತ್ತಿದೆ. ಕಲಾವಿದರ ಸಂಬಳ, ಸೆಟ್, ಗ್ರಾಫಿಕ್ಸ್ ಎಂದೆಲ್ಲಾ ಭಾರೀ ಖರ್ಚು ಮಾಡಲಾಗುತ್ತಿದೆ. ಈ ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿಗೂ ಮುನ್ನ ನಟ ದರ್ಶನ್ ಸಿನಿಮಾದಲ್ಲಿ ಅವಕಾಶ ಪಡೆದಿದ್ದ ಪವಿತ್ರಾ ಜಯರಾಂ