Select Your Language

Notifications

webdunia
webdunia
webdunia
webdunia

ಟಾಕ್ಸಿಕ್ ಸಿನಿಮಾ ಮೂಲಕ ಬಾಲಿವುಡ್ಡನ್ನೇ ಕನ್ನಡಕ್ಕೆ ಕರೆಸಿಕೊಳ್ಳಲಿದ್ದಾರೆ ರಾಕಿಂಗ್ ಸ್ಟಾರ್ ಯಶ್

Toxic Movie

Krishnaveni K

ಬೆಂಗಳೂರು , ಮಂಗಳವಾರ, 16 ಏಪ್ರಿಲ್ 2024 (09:22 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾ ಶೂಟಿಂಗ್ ಶುರುವಾಗುತ್ತಿದ್ದು, ಇದೀಗ ಪಾತ್ರವರ್ಗದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಟಾಕ್ಸಿಕ್ ಸಿನಿಮಾದಲ್ಲಿ ಬಹುಭಾಷೆಯ ಘಟಾನುಘಟಿ ಕಲಾವಿದರ ದಂಡೇ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಮೊದಲು ಬಾಲಿವುಡ್ ನಟಿ ಕರೀನಾ ಕಪೂರ್ ರನ್ನು ಚಿತ್ರತಂಡ ಸಂಪರ್ಕಿಸಿತ್ತು. ಅವರು ಯಶ್ ಸಹೋದರಿಯ ಪಾತ್ರ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು.

ಇದೀಗ ಮತ್ತಷ್ಟು ಬಾಲಿವುಡ್ ಕಲಾವಿದರ ಹೆಸರು ಕೇಳಿಬರುತ್ತಿದೆ. ಬಾಲಿವುಡ್ ನ ನವಾಜುದ್ದೀನ್ ಸಿದ್ದಿಕ್, ನಟಿ ಕಿಯಾರಾ ಅಡ್ವಾಣಿ ಕೂಡಾ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಇವರ ಜೊತೆಗೆ ಮಲಯಾಳಂನ ಶೈನ್ ಟಾಮ್, ಹೆಸರು ಕೂಡಾ ಕೇಳಿಬರುತ್ತಿದೆ. ಆದರೆ ಇದುವರೆಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಬಂದಿಲ್ಲ.

ಈ ಮೊದಲು ಯಶ್, ಮಾಧ‍್ಯಮಗಳ ಮುಂದೆ ನಾನು ಬಾಲಿವುಡ್ ಗೆ ಹೋಗಲ್ಲ, ಬಾಲಿವುಡ್ಡನ್ನೇ ಇಲ್ಲಿಗೆ ಕರೆಸಿಕೊಳ್ಳುತ್ತೇನೆ ಎಂದಿದ್ದರು. ಆ ಮಾತನ್ನು ಅವರು ಟಾಕ್ಸಿಕ್ ಸಿನಿಮಾ ಮೂಲಕ ನಿಜ ಮಾಡುತ್ತಿದ್ದಾರೆ ಎನ್ನಬಹುದು. ಟಾಕ್ಸಿಕ್ ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡ್ರಗ್ಸ್ ಮಾಫಿಯಾ ಕುರಿತು ಕತೆ ಹೆಣೆಯಲಾಗಿದೆ ಎಂಬ ಸುದ್ದಿಯಿದೆ. ಈಗಾಗಲೇ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿತ್ತು. ಗೋವಾ, ಬೆಂಗಳೂರು ಮತ್ತು ವಿದೇಶದ ಕೆಲವು ತಾಣಗಳಲ್ಲಿ ಸಿನಿಮಾ ಚಿತ್ರೀಕರಣವಾಗಲಿದೆ. ಇದಕ್ಕಾಗಿ ಯಶ್ ಮತ್ತು ಚಿತ್ರತಂಡ ಸುಮಾರು ಒಂದು ವರ್ಷ ತಯಾರಿ ನಡೆಸಿತ್ತು. ಹಿಂದೆಂದೂ ಕಾಣದಂತಹ ಆಕ್ಷನ್ ಗಳನ್ನು ಈ ಸಿನಿಮಾದಲ್ಲಿ ನೋಡಬಹುದು. ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಲಿದೆ. ಕೆಜಿಎಫ್ ಸಿನಿಮಾ ಬಳಿಕ ಯಶ್ ಮಾರುಕಟ್ಟೆ ಹೆಚ್ಚಾಗಿದೆ. ಅವರ ಸಿನಿಮಾ ಎಂದರೆ ಇಡೀ ದೇಶವೇ ತಿರುಗಿ ನೋಡುವ ಮಟ್ಟಕ್ಕೆ ಬೆಳೆದಿದ್ದಾರೆ. ಹೀಗಾಗಿ ಕೆವಿಎನ್ ಪ್ರೊಡಕ್ಷನ್ಸ್ ಸಿನಿಮಾವನ್ನು ರಿಚ್ ಆಗಿಯೇ ತೋರಿಸಲು ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ಬಾಸ್‌ ಸಹ ಸ್ಪರ್ಧಿಗಳ ಜತೆ ಬರ್ತಡೇ ಸೆಲೆಬ್ರೇಟ್ ಮಾಡಿದ ನಮ್ರತಾ