ಮುಂಬೈ: ರಾಕಿಂಗ್ ಸ್ಟಾರ್ ಯಶ್ ಎಂದರೆ ಈಗ ರಾಷ್ಟ್ರಮಟ್ಟದಲ್ಲಿ ಎಂಥಾ ಕ್ರೇಜ್ ಇದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಬಾಲಿವುಡ್ ಸ್ಟಾರ್ ಗಳನ್ನು ಮೀರಿಸುವ ರೀತಿ ಅವರಿಗೆ ಜನಪ್ರಿಯತೆಯಿದೆ. ಇದೀಗ ಒಂದೇ ಒಂದು ಪಬ್ಲಿಕ್ ಅಪಿಯರೆನ್ಸ್ ಗೆ ಯಶ್ ಕಳೆದೊಂದು ದಿನದಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆಗೆ ನಿನ್ನೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಕಳಿಂಗ ಏರ್ ಪೋರ್ಟ್ ನಲ್ಲಿ ಯಶ್ ಕಾಣಿಸಿಕೊಂಡಿದ್ದು ಅಂಬಾನಿ ಕುಟುಂಬದ ಕುಡಿ ಅನಂತ್ ಅಂಬಾನಿ ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ ಎಂದು ಹೇಳಲಾಗಿದೆ.
ಯಶ್ ಈ ವೇಳೆ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. ಟಾಕ್ಸಿಕ್ ಸಿನಿಮಾಗಾಗಿಯೇ ಈ ಹೊಸ ಲುಕ್ ಇರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಲುಕ್ ನಲ್ಲಿ ಯಶ್ ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರಾಧಿಕಾ ಕೂಡಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪಪ್ಪಾರಾಜಿಗಳತ್ತ ಯಶ್ ಕೈ ಮುಗಿದು ಕಾರಿನಲ್ಲಿ ಮುನ್ನಡೆದಿದ್ದಾರೆ.
ಯಶ್ ಬಹಳ ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಶೇಷವೆಂದರೆ ನಿನ್ನೆಯಿಂದ ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ಯಶ್ ಟ್ರೆಂಡಿಂಗ್ ನಲ್ಲಿದ್ದಾರೆ. ಒಂದೇ ಒಂದು ಪಬ್ಲಿಕ್ ಅಪಿಯರೆನ್ಸ್ ಗೆ ಇಷ್ಟೊಂದು ಕ್ರೇಜಾ ಎಂದು ನೆಟ್ಟಿಗರು ಅಚ್ಚರಿಪಡುವಂತಾಗಿದೆ.