Select Your Language

Notifications

webdunia
webdunia
webdunia
webdunia

ಜೈಲಿನಿಂದ ಬಿಡುಗಡೆಯಾದ ತಕ್ಷಣ ಈ ಕೆಲಸ ಮಾಡ್ತಾರಂತೆ ನಟ ದರ್ಶನ್

Darshan Thoogudeepa

Krishnaveni K

ಬೆಂಗಳೂರು , ಶನಿವಾರ, 13 ಜುಲೈ 2024 (11:45 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಈಗ ಯಾವಾಗ ಬಿಡುಗಡೆಯಾಗುತ್ತೇನೋ ಎಂದು ಎದಿರು ನೋಡುತ್ತಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಆಪ್ತ ನಟ ಧನ್ವೀರ್ ಬಳಿ ಜೈಲಿನಿಂದ ಬಿಡುಗಡೆಯಾದ ತಕ್ಷಣ ಏನು ಮಾಡಬೇಕೆಂದು ಹೇಳಿದ್ದಾರಂತೆ.

ತಮ್ಮ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿಕೊಂಡಿದ್ದ ದರ್ಶನ್ ಆಂಡ್ ಗ್ಯಾಂಗ್ ಪಟ್ಟಣಗೆರೆ ಶೆಡ್ ನಲ್ಲಿ ಕೂಡಿ ಹಾಕಿ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿತ್ತು. ಪರಿಣಾಮ ರೇಣುಕಾಸ್ವಾಮಿ ಸಾವನ್ನಪ್ಪಿದ್ದ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಆಪ್ತರು ಅವರನ್ನು ಜೈಲಿನಲ್ಲಿ ಭೇಟಿಯಾಗಿ ಬಂದಿದ್ದಾರೆ. ಆ ಪೈಕಿ ನಟ ಧನ್ವೀರ್ ಕೂಡಾ ಒಬ್ಬರು. ದರ್ಶನ್ ಭೇಟಿಯಾದ ಬಳಿಕ ಧನ್ವೀರ್ ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಒಂದು ವಿಚಾರ ಹೇಳಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ತೀರಾ ಬೇಸರದಲ್ಲಿದ್ದಾರೆ. ಜೈಲಿನಿಂದ ಬಿಡುಗಡೆಯಾದ ತಕ್ಷಣ ರೇಣುಕಾಸ್ವಾಮಿ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕು ಎಂದು ಹೇಳಿದ್ದಾರಂತೆ. ಆದರೆ  ಸದ್ಯಕ್ಕೆ ಅವರ ಬಿಡುಗಡೆಯಾಗುವುದೇ ಅನುಮಾನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಂತ್ ಅಂಬಾನಿ ಮದುವೆಯಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ನಾನೊಂದು ತೀರ ನೀನೊಂದು ತೀರ