Select Your Language

Notifications

webdunia
webdunia
webdunia
webdunia

ಆಷಾಢ ಶುಕ್ರವಾರದಂದು ಪ್ರತೀ ವರ್ಷ ಚಾಮುಂಡಿ ದರ್ಶನಕ್ಕೆ ಬರ್ತಿದ್ದ ದರ್ಶನ್: ಇಂದು ಜೈಲಿನಲ್ಲೇ ಪ್ರಾರ್ಥನೆ

Darshan

Krishnaveni K

ಬೆಂಗಳೂರು , ಶುಕ್ರವಾರ, 12 ಜುಲೈ 2024 (09:01 IST)
ಬೆಂಗಳೂರು: ಇಂದು ಆಷಾಢ ಶುಕ್ರವಾರ ದಿನ ವಿಶೇಷವಾಗಿದ್ದು, ಮೈಸೂರಿನ ನಾಡದೇವತೆ ಚಾಮುಂಡಿ ತಾಯಿಯ ದರ್ಶನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು, ವಿಐಪಿಗಳು ಆಗಮಿಸಿ ಪೂಜೆ ಸಲ್ಲಿಸಿ ಹೋಗುತ್ತಾರೆ.

ಪ್ರತೀ ವರ್ಷ ಆಷಾಢ ಶುಕ್ರವಾರದಂದು ನಟ ದರ್ಶನ್ ತಪ್ಪದೇ ಚಾಮುಂಡಿ ತಾಯಿಯ ದರ್ಶನಕ್ಕೆ ಬರುತ್ತಾರೆ. ಆಷಾಢ ಶುಕ್ರವಾರದಂದು ತಮ್ಮ ಸಂಗಡಿಗರೊಂದಿಗೆ ಚಾಮುಂಡಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಆದರೆ ಈ ಬಾರಿ ಅವರ ದುರಾದೃಷ್ಟ ಜೈಲಿನಲ್ಲಿ ಕಳೆಯುವಂತಾಗಿದೆ.

ನಟ ದರ್ಶನ್ ಹಾಗೂ ಕುಟುಂಬದವರು ಮೈಸೂರಿನ ಚಾಮುಂಡಿ ತಾಯಿಯ ಪರಮ ಭಕ್ತರು. ಆಗಾಗ ದರ್ಶನ್ ಇಲ್ಲಿಗೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಿರುತ್ತಾರೆ. ಇದೀಗ ದರ್ಶನ್ ಬಿಡುಗಡೆಯಾಗಲಿ ಎಂದು ಅವರ ಪತ್ನಿ ವಿಜಯಲಕ್ಷ್ಮಿ ಕೂಡಾ ಚಾಮುಂಡಿ ತಾಯಿಯನ್ನು ಬೇಡಿಕೊಳ್ಳುತ್ತಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಗೆ ಈ ಬಾರಿ ದೇವಿಯ ದರ್ಶನ ನೇರವಾಗಿ ಪಡೆಯಲು ಸಾಧ್ಯವಾಗದು. ಹೀಗಾಗಿ ಜೈಲಿನಿಂದಲೇ ಕುಳಿತು ನನ್ನನ್ನು ಕಾಪಾಡು ಎಂದು ದೇವಿಗೆ ಮೊರೆಯಿಡುವ ಪರಿಸ್ಥಿತಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಚ್ಚ ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ವಸ್ತಾರೆ ವಿಧಿವಶ