Select Your Language

Notifications

webdunia
webdunia
webdunia
webdunia

ದರ್ಶನ್ ಬಿಡುಗಡೆಯಾಗುವವರೆಗೂ ಇದನ್ನು ಮುಟ್ಟೋದೇ ಇಲ್ಲ ಎಂದು ಶಪಥ ಮಾಡಿದ ಅಭಿಮಾನಿ

Darshan Thoogudeepa

Krishnaveni K

ಬೆಂಗಳೂರು , ಬುಧವಾರ, 10 ಜುಲೈ 2024 (10:54 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ ಮೇಲೆ ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಅವರ ಮೇಲೆ ತಮ್ಮ ಅಭಿಮಾನ ಹೊರಹಾಕುತ್ತಿದ್ದಾರೆ.

ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದರೂ ಅವರ ಮೇಲಿನ ಅಭಿಮಾನ ಕೆಲವರಲ್ಲಿ ಈಗಲೂ ಹಾಗೆಯೇ ಉಳಿದುಕೊಂಡಿದೆ. ದರ್ಶನ್ ಗೆ ಜೈಲಿನಲ್ಲಿ ನೀಡಲಾಗಿದ್ದ ಕೈದಿ ನಂಬರ್ ಅನ್ನು ತಮ್ಮ ವಾಹನಗಳಲ್ಲಿ, ಮಕ್ಕಳ ಬಟ್ಟೆಗಳಲ್ಲಿ, ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ತೋರಿಸುತ್ತಿದ್ದಾರೆ.

ಕೆಲವರು ಅತಿರೇಕ ಎನಿಸುವಷ್ಟು ಅಭಿಮಾನ ತೋರ್ಪಡಿಸುತ್ತಿದ್ದಾರೆ. ಇದರ ನಡುವೆ ಅಭಿಮಾನಿಯೊಬ್ಬ ದರ್ಶನ್ ಜೈಲಿನಿಂದ ಬಿಡುಗಡೆಯಾಗುವವರೆಗೂ ಕಾಲಿಗೆ ಚಪ್ಪಲಿ ಹಾಕಲ್ಲ ಎಂದು ಶಪಥ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲ ತಿರುಪತಿ ತಿಮ್ಮಪ್ಪನಿಗೂ ಹರಕೆ ಕಟ್ಟಿಕೊಂಡಿದ್ದಾನಂತೆ.

ಮಾಧ್ಯಮಗಳ ಮುಂದೆ ಮಾತನಾಡಿರುವ ಧನುಷ್ ಎಂಬ ಅಭಿಮಾನಿ ಡಿ ಬಾಸ್ ಜೈಲಿನಿಂದ ಬಿಡುಗಡೆಯಾಗುವವರೆಗೂ ನಾನು ಚಪ್ಪಲಿ ಧರಿಸಲ್ಲ. ತಿರುಪತಿ ಹೋಗಿ ಮುಡಿ ಕೊಡುವುದಾಗಿ ಹರಕೆ ಕಟ್ಟಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ಹೀಗಂತ ದರ್ಶನ್ ಮನೆ ಮುಂದೆ ಬಂದು ನಿಂತು ಹರಕೆ ಹೊತ್ತುಕೊಂಡಿದ್ದಾನೆ. ಡಿ ಬಾಸ್ ಎಂದರೆ ನನಗಿಷ್ಟ. ಡಿ ಬಾಸ್ ಆದಷ್ಟು ಬೇಗ ಬಿಡುಗಡೆಯಾಗಿ ಬರಲಿ. ನಾವು ಫ್ಯಾನ್ಸ್ ಸಂಘ ಯಾವತ್ತೂ ಅವರನ್ನು ಬಿಟ್ಟುಕೊಡಲ್ಲೆಎಂದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಗೆ ಮನೆ ಊಟಕ್ಕೆ ಅನುಮತಿ ಕೊಟ್ಟರೂ ಬೇಕಾಬಿಟ್ಟಿ ಬಿರಿಯಾನಿ ತಿನ್ನೋ ಹಾಗಿಲ್ಲ: ಇಲ್ಲಿದೆ ರೂಲ್ಸ್ ವಿವರ