Publish Date: Mon, 08 Jul 2024 (09:03 IST)
Updated Date: Mon, 08 Jul 2024 (09:07 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ಈಗ ಭವಿಷ್ಯದ ಚಿಂತೆ ಕಾಡುತ್ತಿದೆ. ಇದರ ಜೊತೆಗೆ ತನ್ನ ಸಹವಾಸದ ಬಗ್ಗೆಯೇ ಪಶ್ಚಾತ್ತಾಪ ಕಾಡುತ್ತಿದೆ ಎನ್ನಲಾಗಿದೆ.
ಪವಿತ್ರಾ ಗೌಡ ಜೊತೆಗೆ ಆಪ್ತ ಸಂಬಂಧ ಹೊಂದಿದ್ದ ದರ್ಶನ್ ಈಗ ಇದಕ್ಕೆ ತಕ್ಕ ಬೆಲೆ ತೆರುವಂತಾಗಿದೆ. ಈ ಕಾರಣಕ್ಕೆ ಜೈಲಿನಲ್ಲಿ ಪರಸ್ಪರ ಭೇಟಿಯಾಗುವ ಅವಕಾಶ ಸಿಕ್ಕರೂ ದರ್ಶನ್ ತಪ್ಪಿಯೂ ಪವಿತ್ರಾ ಮುಖ ನೋಡುತ್ತಿಲ್ಲವಂತೆ. ಎಲ್ಲವೂ ಪವಿತ್ರಾರಿಂದಾಗಿಯೇ ಆಗಿದ್ದು ಎನ್ನುವ ಸಿಟ್ಟು ಅವರಲ್ಲಿದೆ.
ಇನ್ನೊಂದೆಡೆ ಪತ್ನಿ ವಿಜಯಲಕ್ಷ್ಮಿ, ತಾಯಿ, ಸಹೋದರನ ಪ್ರೀತಿ ದರ್ಶನ್ ರನ್ನು ಭಾವುಕರಾಗಿ ಮಾಡಿದೆ. ಜೊತೆಗೆ ಎದೆಯೆತ್ತರಕ್ಕೆ ಬೆಳೆದಿರುವ ಮಗನ ಮುಂದೆ ಈ ಘಟನೆ ತೀರಾ ಕುಗ್ಗುವಂತೆ ಮಾಡಿದೆ. ಹೀಗಾಗಿ ಜೈಲಿನಲ್ಲಿ ದರ್ಶನ್ ತೀರಾ ಮಂಕಾಗಿ ಇದ್ದಾರೆ ಎನ್ನಲಾಗುತ್ತಿದೆ.
ಇಷ್ಟೆಲ್ಲಾ ನಡೆದ ಮೇಲೆ ಇನ್ನಾದರೂ ದರ್ಶನ್ ನಿಜವಾಗಿಯೂ ತನ್ನವರು ಯಾರು ಎಂದು ಪಾಠ ಕಲಿತಿರಬಹುದು. ಹೀಗಾಗಿ ಪವಿತ್ರಾ ಸಹವಾಸವೇ ಸಾಕು ಎಂದು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಬಲ ಸಾಕ್ಷ್ಯಗಳಿಂದಾಗಿ ದರ್ಶನ್ ಗೆ ಈಗ ಹೊರಗೆ ಬರುವ ದಾರಿಯೇ ತಿಳಿಯದಂತಾಗಿದೆ.