Select Your Language

Notifications

webdunia
webdunia
webdunia
webdunia

ದರ್ಶನ್ ಈ ಕೆಲ್ಸ ಮಾಡ್ತಿದ್ದರೆ ಇಂದು ಜೈಲಲ್ಲಿ ಇರ್ತಿರ್ಲಿಲ್ಲ: ಬಿಸಿ ಪಾಟೀಲ್

Darshan Arrest
Photo Courtesy X
ಚಿತ್ರದುರ್ಗ: ಡಿ ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗಾದ ರೇಣುಕಾಸ್ವಾಮಿ ಕುಟುಂಬವನ್ನು ಮಾಜಿ ಸಚಿವ, ನಟ ಬಿಸಿ ಪಾಟೀಲ್ ಭೇಟಿಯಾಗಿ ಮೃತನ ಪೋಷಕರಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಿ, ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಶಿಕ್ಷಯಾಗಲಿ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಇನ್ನೂ ಮೃತನ ಪತ್ನಿಗೆ ಉದ್ಯೋಗ ಕೊಡಬೇಕೆಂದು ಆಗ್ರಹಿಸಿದರು.  

ಇಲ್ಲಿ ರೇಣುಕಾಸ್ವಾಮಿ ವಿರುದ್ಧ ಪೊಲೀಸರಿಗೆ ದರ್ಶನ್ ಅವರು ಒಂದು ಕರೆ ಮಾಡಿ ದೂರು ನೀಡುತ್ತಿದ್ದರೆ ಎಲ್ಲ ಸಮಸ್ಯೆಯೂ ಬಗೆಹರಿಯುತ್ತಿತ್ತು. ಕೊಲೆ ನಡೆಸುವ ಮಟ್ಟಗೆ ಹೋಗಿರುವುದು ದೊಡ್ಡ ತಪ್ಪು. ದರ್ಶನ್ ಅವರು ಒಳ್ಳೆಯ ವ್ಯಕ್ತಿ, ಒಳ್ಳೆಯ ನಟರಾಗಿದ್ದಾರೆ. ಪ್ರಕರಣ ಕೋರ್ಟ್‌ನಲ್ಲಿದ್ದು  ತನಿಖೆ ಆದ್ಮೇಲೆ ಸತ್ಯ ಏನೆಂದು ಗೊತ್ತಾಗುತ್ತದೆ ಎಂದರು.

ಇನ್ನು ದರ್ಶನ್ ಅವರನ್ನು ಬ್ಯಾನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಫಿಲ್ಮ್ ಚೆಂಬರ್‌ಗೆ ಬಿಟ್ಟಿದ್ದು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಪರಿಶಿಷ್ಟ ಮಕ್ಕಳಿಗೆ ಬಂಪರ್ ಕೊಡುಗೆ ಘೋಷಿಸಿದ ಸಿಎಂ ಸಿದ್ದರಾಮಯ್ಯ