Select Your Language

Notifications

webdunia
webdunia
webdunia
webdunia

ಜು.18ರ ವರೆಗೆ ದರ್ಶನ್‌ ಗ್ಯಾಂಗ್‌ಗೆ ಜೈಲೇ ಗತಿ, ಆದೇಶ ಹೊರಡಿಸಿದ ಜಡ್ಜ್‌

ಜು.18ರ ವರೆಗೆ ದರ್ಶನ್‌ ಗ್ಯಾಂಗ್‌ಗೆ ಜೈಲೇ ಗತಿ, ಆದೇಶ  ಹೊರಡಿಸಿದ ಜಡ್ಜ್‌

Sampriya

ಬೆಂಗಳೂರು , ಗುರುವಾರ, 4 ಜುಲೈ 2024 (15:32 IST)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಹಲವು ಆರೋಪಿಗಳಿಗೆ ಜುಲೈ 18ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಕಸ್ಟಡಿ ನಂತರ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಸೇರಿ ಹಲವು ಆರೋಪಿಗಳ ಅವಧಿ ಇಂದು ಮುಕ್ತಾಯಗೊಂಡ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರನ್ನು ಜಡ್ಜ್ ಮುಂದೆ ಹಾಜರುಪಡಿಸಲಾಯಿತು.  

ವಿಚಾರಣೆ ನಡೆಸಿದ ನ್ಯಾಯಾಧೀಶರು ಜುಲೈ 18ರ ವರೆಗೆ ನಟ ದರ್ಶನ್ ಸೇರಿದಂತೆ ಹಲವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.  ಇದರಿಂದ ದರ್ಶನ್‌ ಗ್ಯಾಂಗ್‌ ಪರಪ್ಪನ ಅಗ್ರಹಾರವೇ ಗತಿಯಾಗಿದೆ.

ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದೆಂಬ ಕೋಪದಲ್ಲಿ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ, ಚಿತ್ರಹಿಂಸೆ ಕೊಟ್ಟು ಕೊಲೆ ನಡೆಸಿತ್ತು. ಈ ಪ್ರಕರಣದಲ್ಲಿ ಪವಿತ್ರ ಅವರು ಎ1 ಆರೋಪಿಯಾಗಿದ್ದು, ದರ್ಶನ್ 12 ಆರೋಪಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ದರ್ಶನ್ ಸೇರಿದಂತೆ 16 ಮಂದಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಟೀಕೆ ಮಾಡುವವರಿಗೆ ನನ್ನ ದರ್ಶನ್ ಸಂಬಂಧ ಗೊತ್ತಿಲ್ಲ: ಸುಮಲತಾ ಅಂಬರೀಶ್ ಆಕ್ರೋಶ