Select Your Language

Notifications

webdunia
webdunia
webdunia
webdunia

ಜೈಲಿನಿಂದ ನಿರ್ಮಾಪಕರಿಗೆ ಕರೆ ಮಾಡ್ತಿರುವ ದರ್ಶನ್

Darshan

Krishnaveni K

ಬೆಂಗಳೂರು , ಮಂಗಳವಾರ, 2 ಜುಲೈ 2024 (15:53 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಜೈಲಿನಿಂದಲೇ ನಿರ್ಮಾಪಕರು ಮತ್ತು ತಮಗೆ ಪರಿಚಿತರಾಗಿರುವ ಪ್ರಭಾವಿಗಳಿಗೆ ಕರೆ ಮಾಡುತ್ತಲೇ ಇದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಇದೇ ವಾರ ಕೋರ್ಟ್ ಗೆ ಹಾಜರಾಗಲಿದ್ದಾರೆ. ಈ ವೇಳೆ ಅವರು ಜಾಮೀನಿಗೆ ಅರ್ಜಿ ಸಲ್ಲಿಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿ ತಮಗೆ ಪರಿಚಿತರಾದವರಿಗೆಲ್ಲಾ ಜೈಲಿನಿಂದ ಕರೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್ ಗೆ ವಾರಕ್ಕೆ ಮೂರು ಬಾರಿ ಅಲ್ಲಿನ ಫೋನ್ ಬೂತ್ ನಿಂದ ಕರೆ ಮಾಡಲು ಅವಕಾಶವಿದೆ. ಆದರೆ ದರ್ಶನ್ ತಮ್ಮ ಸಹ ಕೈದಿಗಳ ಕೋಟಾವನ್ನೂ ತಾವೇ ಬಳಸಿಕೊಂಡು ತಮ್ಮ ಪರಿಚಿತ ನಿರ್ಮಾಪಕರು, ಪ್ರಭಾವಿಗಳಿಗೆ ಕರೆ ಮಾಡಿ ಜಾಮೀನು ಕೊಡಿಸಲು ಪ್ರಯತ್ನಿಸುವಂತೆ ಮನವಿ ಮಾಡುತ್ತಿದ್ದಾರಂತೆ.

ದರ್ಶನ್ ಸೆಲೆಬ್ರಿಟಿಯಾಗಿರುವುದರಿಂದ ಸಾಕಷ್ಟು ಪ್ರಭಾವಿಗಳು, ರಾಜಕಾರಣಿಗಳ ಜೊತೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು. ಆದರೆ ಅವರು ಈಗ ಅರೆಸ್ಟ್ ಆಗಿರುವುದು ಹತ್ಯೆ ಪ್ರಕರಣದಲ್ಲಿ. ಅದೂ ಪ್ರಬಲ ಸಾಕ್ಷ್ಯಗಳು ಅವರ ವಿರುದ್ಧ ಇದೆ. ಹೀಗಿರುವಾಗ ಅವರಿಗೆ ಜಾಮೀನು ಸಿಗುವುದು ಅಷ್ಟು ಸುಲಭವಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

2 ಗಂಟೆ ಕಾದು ಕುಳಿತ ನಟ ಧನ್ವೀರ್‌ ಭೇಟಿಗೆ ನೋ ಎಂದ್ರಾ ದಾಸ