Select Your Language

Notifications

webdunia
webdunia
webdunia
webdunia

ದರ್ಶನ್ ಬಗ್ಗೆ ಕೊನೆಗೂ ಮೌನ ಮುರಿದ ಸುಮಲತಾ: ಆದರೂ ನೇರಾನೇರ ಇಲ್ಲ

Sumalatha Ambareesh

Krishnaveni K

ಬೆಂಗಳೂರು , ಮಂಗಳವಾರ, 2 ಜುಲೈ 2024 (09:34 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನಟ ದರ್ಶನ್ ಬಂಧಿತರಾದ ಬಳಿಕ ಸುಮಲತಾ ಅಂಬರೀಶ್ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ, ದರ್ಶನ್ ಭೇಟಿಗೂ ಬರಲಿಲ್ಲ ಎಂಬ ಅಪವಾದವಿತ್ತು. ಆದರೆ ಈಗ ಸುಮಲತಾ ಕೊನೆಗೂ ಮೌನ ಮುರಿದಿದ್ದಾರೆ.

ದರ್ಶನ್ ಬಂಧನವಾದಾಗಿನಿಂದ ಸುಮಲತಾ ಅಥವಾ ಅವರ ಪುತ್ರ ಅಭಿಷೇಕ್ ಎಲ್ಲೂ ಹೊರಗಡೆ ಕಾಣಿಸಿಕೊಂಡಿಲ್ಲ. ಮಾಧ್ಯಮಗಳ ಮುಂದೆಯೂ ಬಂದಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ದರ್ಶನ್ ಪ್ರಕರಣದ ಬಗ್ಗೆ ಒಂದೇ ಒಂದು ಕಾಮೆಂಟ್ ಹಾಕಿಲ್ಲ. ಹೀಗಾಗಿ ಹಲವರು ಅವರನ್ನು ಟೀಕಿಸಿದ್ದರು.

ಸುಮಲತಾ ರಾಜಕೀಯದಿಂಧ ಹಿಡಿದು ವೈಯಕ್ತಿಕ ಜೀವನದವರೆಗೆ ಎಲ್ಲಾ ವಿಚಾರದಲ್ಲೂ ದರ್ಶನ್ ಮನೆ ಮಗನಂತೆ ಜೊತೆಗೇ ಬಲವಾಗಿ ನಿಂತಿದ್ದರು. ಸುಮಲತಾರನ್ನು ತಮ್ಮ ಹೆತ್ತ ತಾಯಿಯಷ್ಟೇ ಗೌರವದಿಂದ ದರ್ಶನ್ ನೋಡುತ್ತಿದ್ದರು. ಇತ್ತ ಸುಮಲತಾ ಕೂಡಾ ನನ್ನ ಮಗ ದರ್ಶನ್ ಎಂದೇ ಹೇಳುತ್ತಿದ್ದರು. ಆದರೆ ದರ್ಶನ್ ಬಂಧನವಾದ ಮೇಲೆ ಸುಮಲತಾ ಈ ವಿಚಾರದ ಬಗ್ಗೆ ತುಟಿ ಬಿಚ್ಚದೇ ಇರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು.

ಆದರೆ ಈಗ ಸುಮಲತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದೂ ನೇರವಾಗಿ ಅಲ್ಲ. ಇನ್ ಸ್ಟಾಗ್ರಾಂನಲ್ಲಿ ಭಗವದ್ಗೀತೆಯ ಶ್ಲೋಕವೊಂದರ ಸಾರವನ್ನು ಬರೆದುಕೊಂಡಿದ್ದಾರೆ. ಒಳ್ಳೆಯದು ಆಗುವುದಕ್ಕೆ ಮೊದಲು ಕೆಟ್ಟದಾಗುತ್ತದೆ. ಹಾಗಿದ್ದರೆ ಒಳ್ಳೆಯದಕ್ಕೆ ಕಾಲ ಬರುತ್ತದೆ ಎಂದರ್ಥ. ಎಲ್ಲದಕ್ಕೂ ಭರವಸೆ ಬೇಕು ಎಂದು ಸುಮಲತಾ ಬರೆದುಕೊಂಡಿದ್ದಾರೆ.

ಇದು ದರ್ಶನ್ ಬಗ್ಗೆಯೇ ಪರೋಕ್ಷವಾಗಿ ಹೇಳಿರುವುದು ಎಂದು ವಿಶ್ಲೇಷಿಸಲಾಗಿದೆ. ದರ್ಶನ್ ವಿಚಾರದಲ್ಲಿಯೂ ಈಗ ಕೆಟ್ಟದಾಗಿದ್ದರೂ ಮುಂದೆ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ಹೇಳಿರಬಹುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇಗೆ ಮನೆ ಹತ್ರ ಬರ್ಬೇಡಿ ಎಂದ ನಟ ಗಣೇಶ್ ಗೆ ನಮಗೂ ನಿಮ್ ಸಿನಿಮಾ ನೋಡಕ್ಕೆ ಟೈಂ ಇಲ್ಲ ಎಂದ ನೆಟ್ಟಿಗರು