Select Your Language

Notifications

webdunia
webdunia
webdunia
webdunia

ಬರ್ತ್ ಡೇಗೆ ಮನೆ ಹತ್ರ ಬರ್ಬೇಡಿ ಎಂದ ನಟ ಗಣೇಶ್ ಗೆ ನಮಗೂ ನಿಮ್ ಸಿನಿಮಾ ನೋಡಕ್ಕೆ ಟೈಂ ಇಲ್ಲ ಎಂದ ನೆಟ್ಟಿಗರು

Golden star Ganesh

Krishnaveni K

ಬೆಂಗಳೂರು , ಮಂಗಳವಾರ, 2 ಜುಲೈ 2024 (08:57 IST)
Photo Credit: Facebook
ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್ ವುಡ್ ತಾರೆಯರು ಹಲವು ಕಾರಣಗಳಿಂದ ಹುಟ್ಟುಹಬ್ಬದಂದು ತಮ್ಮ ಮನೆಗೆ ಅಭಿಮಾನಿಗಳಿಗೆ ಬರುವುದು ಬೇಡ ಎನ್ನುತ್ತಿದ್ದಾರೆ. ಅದರಂತೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ನಿನ್ನೆ ಇದೇ ರೀತಿಯ ಪೋಸ್ಟ್ ಹಾಕಿದ್ದರು.

ಇಂದು ಗಣೇಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಗಣೇಶ್, ಈ ಬಾರಿಯೂ ನಿಮ್ಮ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ಯಾರೂ ಮನೆ ಹತ್ರ ಬರಬೇಡಿ. ನಾನು ಹುಟ್ಟುಹಬ್ಬದಂದು ಮನೆಯಲ್ಲಿರಲ್ಲ. ನೀವು ಎಲ್ಲಿ ಇದ್ದೀರೋ ಅಲ್ಲಿದಂಲೇ ವಿಶ್ ಮಾಡಿ ಸಾಕು ಎಂದಿದ್ದರು.

ಕಳೆದ ಬಾರಿಯೂ ಗಣೇಶ್ ಇದೇ ನೆಪ ಹೇಳಿದ್ದರು. ಹೀಗಾಗಿ ನೆಟ್ಟಿಗರು ಅವರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ನಮಗೂ ನಿಮ್ಮ ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಲು ಪುರುಸೊತ್ತಿಲ್ಲ. ಹೀಗಾಗಿ ಒಟಿಟಿಯಲ್ಲೇ ನೋಡಿಕೊಳ್ತೀವಿ ಬಿಡಿ ಎಂದಿದ್ದಾರೆ. ಮತ್ತೆ ಕೆಲವರು ನಮ್ಮ ಗಾಡಿ ಖರ್ಚು ಉಳಿಯಿತು ಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನು ಕೆಲವರು, ಪ್ರತೀ ಬಾರಿ ನೀವು ಇದೇ ಮಾತು ಹೇಳಿದರೆ ಹೇಗೆ? ಇರುವ ಅಲ್ಪ ಸ್ವಲ್ಪ ಅಭಿಮಾನಿಗಳನ್ನೂ ಕಳೆದುಕೊಳ್ಳುತ್ತೀರಾ. ನಿಮ್ಮನ್ನು ಬೆಳೆಸಿದ ಅಭಿಮಾನಿಗಳಿಂದ ದೂರ ಓಡಲು ನೋಡಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ. ಪ್ರತೀ ಬಾರಿ ಅದೇ ರಾಗ ಅದೇ ಹಾಡು ಎಂದು ಮೂಗು ಮುರಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೇಳಿದಾಂಗೆ ಮಾಡಿದ ಕಿಚ್ಚ ಸುದೀಪ್: ಅಭಿಮಾನಿಗಳು ಖುಷ್