Publish Date: Sat, 29 Jun 2024 (09:52 IST)
Updated Date: Sat, 29 Jun 2024 (09:54 IST)
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಧ್ವನಿ ಪರೀಕ್ಷೆ ವೇಳೆ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಲು ಹೋದ ಘಟನೆ ನಡೆದಿದೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ವಿಡಿಯೋ ಸಾಕ್ಷ್ಯಗಳಿವೆ. ಈ ವಿಡಿಯೋಗಳಲ್ಲಿ ಕೇಳಿಬರುತ್ತಿರುವ ಧ್ವನಿ ಪ್ರಜ್ವಲ್ ರದ್ದೇ ಎಂದು ಖಚಿತಪಡಿಸಲು ಪೊಲೀಸರು ಧ್ವನಿ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ ಈ ವೇಳೆ ಪ್ರಜ್ವಲ್ ಪೊಲೀಸರಿಗೇ ಚಮಕ್ ಕೊಡಲು ಹೋಗಿದ್ದಾರೆ.
ಬೇಕೆಂದೇ ಧ್ವನಿ ಪರೀಕ್ಷೆ ವೇಳೆ ಧ್ವನಿ ಬದಲಾಯಿಸಿ ಮಾತನಾಡುವ ಮೂಲಕ ತಮ್ಮ ಧ್ವನಿ ಬದಲಾಯಿಸಿ ಮಾತನಾಡಿ ತಮ್ಮ ಧ್ವನಿ ಗುರುತು ಸಿಗದಂತೆ ಚಮಕ್ ಕೊಡಲು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಪ್ರಜ್ವಲ್ ತನಿಖೆ ವೇಳೆ ಪೊಲೀಸರಿಗೆ ಸಹಕಾರ ಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ಅದರ ನಡುವೆ ಧ್ವನಿ ಬದಲಾಯಿಸಲು ಪ್ರಯತ್ನಿಸಿ ಧ್ವನಿ ಪರೀಕ್ಷೆಗೂ ತೊಂದರೆ ಕೊಟ್ಟಿದ್ದಾರೆ ಎನ್ನಲಾಗಿದೆ. ನೂರಾರು ಮಹಿಳೆಯರ ಮೇಲೆ ಪ್ರಜ್ವಲ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವಿದೆ. ಈ ಆರೋಪಗಳಿಂದ ತಪ್ಪಿಸಿಕೊಳ್ಳಲು ಪ್ರಜ್ವಲ್ ಹರಸಾಹಸ ಪಡುತ್ತಿದ್ದಾರೆ.