Publish Date: Tue, 02 Jul 2024 (08:50 IST)
Updated Date: Tue, 02 Jul 2024 (08:55 IST)
ಬೆಂಗಳೂರು: ಕಿಚ್ಚ ಸುದೀಪ್ ಯಾವತ್ತೂ ಮಾತಿಗೆ ತಪ್ಪಲ್ಲ ಎಂದು ಅಭಿಮಾನಿಗಳಿಗೆ ಒಂದು ನಂಬಿಕೆಯಿದೆ. ಆ ನಂಬಿಕೆಯನ್ನು ಅವರು ಈಗಲೂ ನಿಜ ಮಾಡುತ್ತಿದ್ದಾರೆ. ಅದು ಮ್ಯಾಕ್ಸ್ ಸಿನಿಮಾ ವಿಚಾರದಲ್ಲಿ.
ಕಿಚ್ಚ ಸುದೀಪ್ ಹಲವು ದಿನಗಳಿಂದ ಎಲ್ಲೇ ಹೋದರೂ ಅವರಿಗೆ ಮ್ಯಾಕ್ಸ್ ಸಿನಿಮಾ ಅಪ್ ಡೇಟ್ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ಇತ್ತೀಚೆಗೆ ಸುದೀಪ್ ಗೆ ಮಾಧ್ಯಮಗಳು ಈ ಪ್ರಶ್ನೆ ಕೇಳಿದಾಗ ಆಗಸ್ಟ್ ನಲ್ಲಿ ಸಿನಿಮಾ ಬರಬಹುದು. ಈಗಾಗಲೇ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದಿದ್ದರು.
ಹೀಗಾಗಿ ಮ್ಯಾಕ್ಸ್ ಸಿನಿಮಾ ಅಪ್ ಡೇಟ್ ಸದ್ಯದಲ್ಲೇ ಸಿಗಲಿದೆ ಎಂದು ಅಭಿಮಾನಿಗಳಿಗೆ ಭರವಸೆ ಸಿಕ್ಕಿತ್ತು. ಇದೀಗ ಆ ಭರವಸೆ ನಿಜವಾಗುತ್ತಿದೆ. ಮ್ಯಾಕ್ಸ್ ಸಿನಿಮಾ ತಂಡದಿಂದ ಅಪ್ ಡೇಟ್ ಒಂದು ಸಿಕ್ಕಿದ್ದು ಸದ್ಯದಲ್ಲೇ ಮ್ಯಾಕ್ಸ್ ಸಿನಿಮಾ ಬಗ್ಗೆ ಎಕ್ಸೈಟ್ ಆಗಿರುವ ಸುದ್ದಿ ಕೊಡಲಿದ್ದೇವೆ ಎಂದು ಪ್ರಕಟಣೆ ನೀಡಿದೆ.
ಯಾವಾಗ ಅಪ್ ಡೇಟ್ ಕೊಡುತ್ತಿದ್ದೇವೆ ಎಂದು ನಿಗದಿತ ದಿನಾಂಕ ಪ್ರಕಟಿಸಿಲ್ಲ. ಆದರೆ ಇಂತಹದ್ದೊಂದು ಅಪ್ ಡೇಟ್ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಿಚ್ಚ ಸುದೀಪ್ ಸಿನಿಮಾ ಬಿಡುಗಡೆಯಾಗಿಲ್ಲ. ಹೀಗಾಗಿ ಅಭಿಮಾನಿಗಳು ಅವರ ಸಿನಿಮಾ ಬಿಡುಗಡೆಯಾಗುವುದನ್ನೇ ಜನ ಕಾಯ್ತಿದ್ದಾರೆ.