Select Your Language

Notifications

webdunia
webdunia
webdunia
Friday, 11 April 2025
webdunia

ದರ್ಶನ್ ರನ್ನು ದೆವ್ವ ಎಂದು ಪರೋಕ್ಷವಾಗಿ ಕರೆದು ತಿವಿದ ಉಮಾಪತಿ ಗೌಡ

Umapathy Gowda

Krishnaveni K

ಬೆಂಗಳೂರು , ಸೋಮವಾರ, 1 ಜುಲೈ 2024 (11:35 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ರನ್ನು ನಿರ್ಮಾಪಕ ಉಮಾಪತಿ ಗೌಡ ಪರೋಕ್ಷವಾಗಿ ದೆವ್ವಕ್ಕೆ ಹೋಲಿಸಿದ್ದಾರೆ.

ದರ್ಶನ್ ಬಂಧನವಾದ ಬಳಿಕ ಉಮಾಪತಿ ಗೌಡ ತಮ್ಮಿಬ್ಬರ ನಡುವಿನ ಮನಸ್ತಾಪವನ್ನೇ ಹೊರಹಾಕುತ್ತಿದ್ದಾರೆ. ಈ ಹಿಂದೆ ದರ್ಶನ್ ತಮ್ಮನ್ನು ತಗಡು ಎಂದು ಕರೆದಿದ್ದಕ್ಕೆ ಉಮಾಪತಿ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಉಮಾಪತಿ ವಿರುದ್ಧ ದರ್ಶನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕೆಂಡ ಕಾರುತ್ತಿದ್ದಾರೆ.

ದರ್ಶನ್ ವಿರುದ್ಧ ಹೇಳಿಕೆ ಕೊಟ್ಟಾಗಿನಿಂದ ಉಮಾಪತಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಟಾರ್ಗೆಟ್ ಆಗಿದ್ದಾರೆ. ಜೊತೆಗೆ ದರ್ಶನ್ ಗೆ ಈಗಾಗಲೇ ಸಿನಿಮಾ ರಂಗದ ಅನೇಕ ತಾರೆಯರು ಬೆಂಬಲ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಉಮಾಪತಿ ಗೌಡ ಇನ್ನೊಂದು ಹೇಳಿಕೆ ನೀಡಿದ್ದು, ದರ್ಶನ್ ರನ್ನು ದೆವ್ವಕ್ಕೆ ಹೋಲಿಸಿ ಮಾತನಾಡಿದ್ದಾರೆ. ಇದು ದರ್ಶನ್ ಫ್ಯಾನ್ಸ್ ಮತ್ತಷ್ಟು ಕೆರಳುವಂತೆ ಮಾಡಲಿದೆ.

ಕೋಲಾರದಲ್ಲಿ ಮಾತನಾಡಿದ ಅವರು ಹಿಂದೆಯೂ ನಾನು ಹೇಳಿದ್ದೆ. ನಿನ್ನ ಸ್ನೇಹಿತರನ್ನು ತೋರಿಸು, ನೀನೇನು ಹೇಳುವೆ ಎಂದು. ನಾವು ದೇವರನ್ನು ಪೂಜೆ ಮಾಡುತ್ತೇವೆ. ಆದರೆ ದೆವ್ವಗಳನ್ನು ಪೂಜೆ ಮಾಡುವ ಒಂದು ವರ್ಗ ಇರುತ್ತೆ, ಅದು ಅವರವರ ಆಯ್ಕೆ ಎಂದು ಹೇಳಿದ್ದಾರೆ. ಈ ಹೇಳಿಕೆ ದರ್ಶನ್ ರನ್ನು ಉದ್ದೇಶಿಸಿಯೇ ಹೇಳಿದ್ದು ಎಂದು ವಿಶ್ಲೇಷಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್‌ಕುಮಾರ್ ಕನಸನ್ನು ನನಸಾಗಿಸುವ ಕೆಲಸ ಮಾಡುತ್ತೇನೆ: ಸಿದ್ದರಾಮಯ್ಯ