Select Your Language

Notifications

webdunia
webdunia
webdunia
webdunia

ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ಘೋಷಣೆ

Raj B Shetty

Krishnaveni K

ಬೆಂಗಳೂರು , ಶುಕ್ರವಾರ, 28 ಜೂನ್ 2024 (10:42 IST)
ಬೆಂಗಳೂರು: ಸ್ಯಾಂಡಲ್ ವುಡ್ ಪ್ರತಿಭಾವಂತ ನಟ ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ಘೋಷಣೆಯಾಗಿದೆ. ರೂಪಾಂತರ ಎನ್ನುವ ವಿಶಿಷ್ಟ ಸಿನಿಮಾದೊಂದಿಗೆ ಅವರು ಮತ್ತೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ರಾಜ್ ಬಿ ಶೆಟ್ಟಿ ಮೊನ್ನೆಯಷ್ಟೇ ತಾವು ಸದ್ಯದಲ್ಲೇ ತಮ್ಮದೇ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಘೋಷಣೆ ಮಾಡುವುದಾಗಿ ಹೇಳಿದ್ದರು. ಅದರಂತೆ ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ರೂಪಾಂತರ ಎನ್ನುವ ಟೈಟಲ್ ಜೊತೆಗೆ ವಿಶಿಷ್ಟ ಪೋಸ್ಟರ್ ನ್ನೂ ಪ್ರಕಟಿಸಿದ್ದಾರೆ.

ರಾಜ್ ಬಿ ಶೆಟ್ಟಿ ಇದಕ್ಕೆ ಮೊದಲು ಮಲಯಾಳಂನಲ್ಲಿ ಟರ್ಬೊ ಸಿನಿಮಾ ಮುಗಿಸಿ ಬಂದಿದ್ದಾರೆ. ಈ ಮೂಲಕ ಪರಭಾಷೆಯಲ್ಲೂ ಅವರು ಅಭಿಮಾನಿ ಬಳಗವನ್ನು ಸೃಷ್ಟಿಸಿದ್ದಾರೆ. ಇದಕ್ಕೆ ಮೊದಲು ಕನ್ನಡದಲ್ಲಿ ಟೋಬಿ, ಸ್ವಾತಿ ಮುತ್ತಿನ ಮಳೆ ಹನಿಯೆ ಸಿನಿಮಾ ಮಾಡಿ ತಕ್ಕಮಟ್ಟಿನ ಯಶಸ್ಸು ಪಡೆದಿದ್ದಾರೆ.

ಇದೀಗ ರೂಪಾಂತರ ಎನ್ನುವ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಸಿನಿಮಾ ನನಗೆ ಲಭಿಸಿರುವುದು ನನ್ನ ಭಾಗ್ಯ. ಇದು ನನ್ನ ವೃತ್ತಿ ಜೀವನದ ವಿಶೇಷ ಸಿನಿಮಾವಾಗಲಿದೆ. ಸದ್ಯದಲ್ಲೇ ಈ ಸಿನಿಮಾ ನಿಮ್ಮ ಮುಂದೆ ಬರಲಿದೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಅಣ್ಣ ತೊಂದರೆ ಕೊಡುವವರಲ್ಲ ಎಂದ ನಟ ನಾಗ ಶೌರ್ಯ