Select Your Language

Notifications

webdunia
webdunia
webdunia
webdunia

ದರ್ಶನ್ ಅರೆಸ್ಟ್ ಬೆನ್ನಲ್ಲೇ ಗಮನ ಸೆಳೆದ ರಕ್ಷಿತಾ ಪ್ರೇಮ್ ಟೆಂಪಲ್ ರನ್

Rakshitha Prem

Krishnaveni K

ಬೆಂಗಳೂರು , ಶನಿವಾರ, 22 ಜೂನ್ 2024 (11:39 IST)
Photo Credit: Instagram
ಬೆಂಗಳೂರು: ದರ್ಶನ್ ಮತ್ತು ರಕ್ಷಿತಾ ಪ್ರೇಮ್ ಮಧ್ಯೆ ಎಂಥಾ ಆತ್ಮೀಯ ಸ್ನೇಹವಿದೆ ಎಂದು ಎಲ್ಲರಿಗೂ ಗೊತ್ತು. ಚಿಕ್ಕಂದಿನಿಂದಲೂ ಇಬ್ಬರೂ ಆಪ್ತ ಸ್ನೇಹಿತರು. ಈಗಲೂ ಆ ಸ್ನೇಹ ಮುಂದುವರಿದಿದೆ.
 

ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರೆ ಇತ್ತ ರಕ್ಷಿತಾ ಪ್ರೇಮ್ ಟೆಂಪಲ್ ರನ್ ನಡೆಸಿದ್ದಾರೆ. ರಕ್ಷಿತಾ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ದಕ್ಷಿಣ ಕನ್ನಡದ ಪ್ರಮುಖ ದೇವಾಲಯಗಳಿಗೆ ತಮ್ಮ ಸಂಗಡಿಗರ ಜೊತೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ.

ಈ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಕ್ಷಿತಾ ಈ ರೀತಿ ದಕ್ಷಿಣ ಕನ್ನಡದ ಪ್ರಸಿದ್ಧ ದೇವಾಲಯಗಳಿಗೆ ಹೋಗುವುದು ಇದೇ ಮೊದಲೇನಲ್ಲ. ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಸ್ನೇಹಿತರ ಜೊತೆ ದೇವಾಲಯ ದರ್ಶನಕ್ಕೆ ತೆರಳುತ್ತಾರೆ.

ಆದರೆ ಇದೀಗ ಸ್ನೇಹಿತ ದರ್ಶನ್ ಸಂಕಷ್ಟದಲ್ಲಿರುವಾಗ ರಕ್ಷಿತಾ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ದರ್ಶನ್ ಪ್ರಕರಣವಾದ ಬಳಿಕ ರಕ್ಷಿತಾ ಈ ಬಗ್ಗೆ ಒಂದೇ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿಲ್ಲ. ಆದರೆ ಈಗ ನಡೆಸಿರುವ ಟೆಂಪಲ್ ರನ್ ನಲ್ಲಿ ಗೆಳೆಯನಿಗಾಗಿಯೂ ಒಂದು ಪ್ರಾರ್ಥನೆ ಇದ್ದಿರಬಹುದು ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿಗೆ ಹೋದರೂ ಪವಿತ್ರಾ ಗೌಡಗೆ ಬಿಡದ ‘ಡಿ’ ನಂಟು