Publish Date: Sat, 22 Jun 2024 (10:28 IST)
Updated Date: Sat, 22 Jun 2024 (10:31 IST)
ಬೆಂಗಳೂರು: ರೇಣುಕಾಸ್ವಾಮಿ ಕೇಸ್ ನಲ್ಲಿ ನಟ ದರ್ಶನ್ ಹಾಗೂ ಇತರರು ಅರೆಸ್ಟ್ ಆಗುತ್ತಿದ್ದಂತೇ ಅವರ ಅಭಿಮಾನಿಗಳ ಆಕ್ರೋಶ ಪವಿತ್ರಾ ಗೌಡ ಮೇಲೆ ತಿರುಗಿದೆ.
ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ತಮ್ಮ ಹುಡುಗರಿಗೆ ಹೇಳಿ ಚಿತ್ರದುರ್ಗದಿಂದ ಇಲ್ಲಿಗೆ ಕರೆಸಿ ದರ್ಶನ್ ಆಂಡ್ ಪಟಾಲಂ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಈ ಘಟನೆಯಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವರು ಬಂಧಿತರಾಗಿದ್ದಾರೆ.
ಪ್ರಕರಣದಲ್ಲಿ ದರ್ಶನ್ ವಿರುದ್ಧ ಬಲವಾದ ಸಾಕ್ಷ್ಯ ಸಂಗ್ರಹಿಸಲಾಗಿದೆ. ಹೀಗಾಗಿ ದರ್ಶನ್ ಹೊರಬರುವುದು ಕಷ್ಟವಾಗಿದೆ. ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಪವಿತ್ರಾ ಗೌಡ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಛೀಮಾರಿ ಹಾಕಿ ಆಕ್ರೋಶ ತೀರಿಸಿಕೊಳ್ಳುತ್ತಿದ್ದಾರೆ.
ನಮ್ ಬಾಸ್ ಗೆ ಹೀಗಾಗುವುದಕ್ಕೆ ನೀನೇ ಕಾರಣ. ನೀನು ಸುಮ್ಮನಿದ್ದರೆ ಸಾಕಿತ್ತು. ಬಾಸ್ ನ ಕೆರಳಿಸಿ ಈಗ ಅವರ ಜೀವನವನ್ನೇ ಹಾಳು ಮಾಡಿದೆ ಎಂದು ಪವಿತ್ರಾ ಗೌಡರ ಇನ್ ಸ್ಟಾಗ್ರಾಂನ ಹೆಚ್ಚಿನ ಪೋಸ್ಟ್ ಗಳಲ್ಲಿ ದರ್ಶನ್ ಅಭಿಮಾನಿಗಳು ಆಕ್ರೋಶ ಭರಿತ ಕಾಮೆಂಟ್ ಮಾಡುತ್ತಿದ್ದಾರೆ.