Publish Date: Sat, 22 Jun 2024 (09:49 IST)
Updated Date: Sat, 22 Jun 2024 (09:51 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ರನ್ನು ಇಂದು ಮತ್ತೆ ಕೋರ್ಟ್ ಗೆ ಹಾಜರುಪಡಿಸಲಾಗುತ್ತದೆ. ಇಂದು ಅವರಿಗೆ ಜೈಲೂಟ ಫಿಕ್ಸ್ ಆಗಲಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್ ನ ವಿಚಾರಣೆ ನಡೆಸಿದದ ಪೊಲೀಸರು ಈಗಾಗಲೇ ದರ್ಶನ್ ಮತ್ತು ಇತರೆ ಆರೋಪಿಗಳನ್ನು ಎರಡು ಬಾರಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಮೊನ್ನೆಯಷ್ಟೇ ಎರಡನೇ ಬಾರಿಗೆ ಕೋರ್ಟ್ ಗೆ ಹಾಜರಾದಾಗ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಈಗಾಗಲೇ ವಿಚಾರಣೆ ಮುಗಿದ ಕೆಲವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು.
ಆದರೆ ದರ್ಶನ್ ಮತ್ತು ನಾಲ್ವರು ಆರೋಪಿಗಳ ವಿಚಾರಣೆ ಬಾಕಿಯಿದೆ ಎನ್ನುವ ಕಾರಣಕ್ಕೆ ಎರಡು ದಿನಗಳಿಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಅದರಂತೆ ಇಂದು ಮತ್ತೆ ದರ್ಶನ್ ಮತ್ತು ನಾಲ್ವರು ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಬಹುದು. ಈ ವೇಳೆ ನ್ಯಾಯಾಲಯ ಇಂದು ನ್ಯಾಯಾಂಗ ಬಂಧನಕ್ಕೊಪ್ಪಿಸಿಬಹುದು. ಇದರಿಂದಾಗಿ ದರ್ಶನ್ ಮತ್ತು ಅವರ ಜೊತೆಗಿರುವ ಆರೋಪಿಗಳೂ ಇತರೆ ಆರೋಪಿಗಳ ಜೊತೆ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.
ಈಗಾಗಲೇ ಪವಿತ್ರಾ ಗೌಡ ಸೇರಿದಂತೆ ಕೆಲವು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು. ಈಗ ದರ್ಶನ್ ಅವರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸುವ ಸಾಧ್ಯತೆಯಿದೆ.