Select Your Language

Notifications

webdunia
webdunia
webdunia
webdunia

ಜೈಲು ಸೇರಿದ ಪವಿತ್ರಾಗೆ ಊಟ ಸೇರುತ್ತಿಲ್ಲ, ನಿದ್ದೆ ಬರುತ್ತಿಲ್ಲ

Pavitra Gowda Jail Life Style

Sampriya

ಬೆಂಗಳೂರು , ಶುಕ್ರವಾರ, 21 ಜೂನ್ 2024 (17:27 IST)
ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಸೂತ್ರದಾರಿಯಾಗಿರುವ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ 6024 ನಂಬರ್‌ನಲ್ಲಿ ವಿಚಾರನಾಧೀನ ಕೈದಿಯಾಗಿದ್ದಾರೆ.

ನಿನ್ನೆ ಪವಿತ್ರಾ ಗೌಡ ಅವರನ್ನು ಪೊಲೀಸ್ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಅದರಂತೆ ಪವಿತ್ರಾ ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಪ್ಟ್ ಮಾಡಿದ್ದು, ಇದೀಗ ಜೈಲಿನಲ್ಲಿ ಒಂದು ದಿನ ಕಳೆದಿದ್ದಾರೆ.

ಡಿ ಬ್ಯಾರಕ್‌ನಲ್ಲಿರುವ ಪವಿತ್ರಾ ಗೌಡ ರಾತ್ರಿ ಸರಿಯಾಗಿ ಊಟ ಮಾಡಿಲ್ಲ ಎಂಬ ಮಾಹಿತಿಯಿದೆ. ಅದಲ್ಲದೆ ನಿದ್ದೆ ಬಾರದೆ ಪರದಾಡಿದ್ದಾರಂತೆ. ಇಂದು ಮುಂಜಾನೆ ಬೇಗೆ ಎದ್ದಿರುವ ಪವಿತ್ರಾ ಗೌಡ ವಾಕಿಂಗ್ ಮಾಡಿದ್ದು, ಇನ್ನೂ ಜೈಲಿಗೆ ಬಂದಿರುವ ದಿನಪತ್ರಿಕೆಯನ್ನು ಓದಿ, ಜೈಲಿನ ಮೆನುವಿನಂತೆ ಉಪ್ಪಿಟ್ಟು ತಿಂದಿದ್ದಾರೆ.

ಇನ್ನೂ ಪವಿತ್ರಾ ಗೌಡ ಜೈಲು ಸೇರಿ ಒಂದು ದಿನವಾಗುತ್ತಿರುವಾಗಲೇ ಅವರ ತಾಯಿ, ತಮ್ಮ, ಚಿಕ್ಕಪ್ಪ ಅವರು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ.

ಚಿತ್ರದುರ್ಗಾದ ರೇಣುಕಸ್ವಾಮಿ ಕಿಡ್ನಾಪ್, ಚಿತ್ರಹಿಂಸೆ ಹಾಗೂ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರ ಪ್ರಚೋಧನೆಯಿಂದಲೇ ಈ ಕೊಲೆ ನಡೆದಿದೆ ಎಂದು ರಿಮೈಂಡ್ ಕಾಫಿಯಲ್ಲಿ ಉಲ್ಲೇಖವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದುನಿಯಾ ವಿಜಿ ಅಭಿಮಾನಿಗಳಿಗೆ ಸಿಹಿ ಸುದ್ದಿ, 'ಭೀಮ' ತೆರೆಗೆ ಬರಲು ಡೇಟ್ ಫಿಕ್ಸ್‌