Select Your Language

Notifications

webdunia
webdunia
webdunia
webdunia

ದರ್ಶನ್ ಕೊಲೆಗಡುಕನಲ್ಲ, ನಟನ ಪರ ಬ್ಯಾಟಿಂಗ್ ಮಾಡಿದ ಶಾಸಕ ಉದಯ್ ಗೌಡ

MLA Uday Giowda

Sampriya

ಬೆಂಗಳೂರು , ಶುಕ್ರವಾರ, 21 ಜೂನ್ 2024 (15:17 IST)
Photo Courtesy X
ಬೆಂಗಳೂರು: ನಟ ದರ್ಶನ್ ಅವರದ್ದು, ಒಳ್ಳೆಯ ವ್ಯಕ್ತಿತ್ವ, ಸ್ವಲ್ಪ ಮುಂಗೋಪಿ ಬಿಟ್ಟರೆ, ಕೊಲೆ ಮಾಡುವ ಮನಸ್ಥಿತಿಯವರಲ್ಲ ಎಂದು ಮದ್ದೂರು ಶಾಸಕ ಕದಲೂರು ಉದಯ್ ಗೌಡ ಅವರು ನಟನ ನಡವಳಿಕೆಯನ್ನು ಸಮರ್ಥನೆ ಮಾಡಿಕೊಂಡರು.

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಅವರ ಪರ ಬ್ಯಾಟಿಂಗ್ ಮಾಡಿದ ಉದಯ್ ಗೌಡ ಅವರು, ಕೊಲೆಮಾಡುವ ಬುದ್ದಿ ದರ್ಶನ್‌ಗಿಲ್ಲ ಎಂದರು.

ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಪಕ್ಷದ ನಾಯಕರಿಗೆ ದರ್ಶನ್ ಪರ ಯಾರು ಒತ್ತಡ ಹೇರಬಾರದೆಂದು ಖಡಕ್ ವಾರ್ನಿಂಗ್ ಕೊಟ್ಟಿದ್ದರು ಶಾಸಕ ಉದಯ್ ಗೌಡ ಅವರು ದರ್ಶನ್ ಬಗ್ಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೀಡಿದ್ದಾರೆ.

ತುಂಬಾ ವರ್ಷಗಳಿಂದ ನಾನು ಮತ್ತು ದರ್ಶನ್‌ ಸ್ನೇಹಿತರಾಗಿದ್ದೇವೆ. ಇದು ಯಾಕೆ ಆಯ್ತು? ಏನಕ್ಕೆ ಆಯ್ತು ಅಂತ ನಮಗೆ ಮಾಹಿತಿ ಇಲ್ಲ. ತನಿಖೆಯಲ್ಲಿ ಸತ್ಯ ವಿಚಾರ ಗೊತ್ತಾಗುತ್ತದೆ. ಇಷ್ಟಂತೂ ಸತ್ಯ ದರ್ಶನ್ ಕೊಲೆಗಡುಕ ಅಲ್ಲ ಎಂದು ತಿಳಿಸಿದರು.

ನಾವು ಪ್ರಭಾವ ಬೀರುವ ಹಾಗೇ ಇದ್ದರೆ ಅವರು ಜೈಲಿನಲ್ಲಿ ಇರುತ್ತಿದ್ದರಾ ಹೇಳಿ? ಯಾರು ಕೇಸ್ ಮೇಲೆ ಪ್ರಭಾವ ಬೀರಿಲ್ಲ. ಬೀರಿದ್ದರೆ ಇಂತಹ ಸ್ಥಿತಿಗೆ ಬರುತ್ತಿರಲಿಲ್ಲ. ಯಾರು ಇದರಲ್ಲಿ ಭಾಗಿ ಆಗುತ್ತಿಲ್ಲ. ಪಾರದರ್ಶಕವಾಗಿ ತನಿಖೆ ಆಗುತ್ತಿದ್ದು ಸತ್ಯ ಹೊರಗೆ ಬರುತ್ತದೆ ಎಂದರು.

ಇನ್ನೂ ರೇಣುಕಸ್ವಾಮಿ ಕೊಲೆ ನಡೆದಿರುವುದು ಖಂಡನೀಯ. ಯಾರೇ ಕೊಲೆ ಮಾಡಿದ್ದರೂ ತಪ್ಪೇ, ಈ ಪ್ರಕರಣದಲ್ಲಿ ದರ್ಶನ್ ಪಾತ್ರ ಏನೆಂದು ತನಿಖೆಯಿಂದ ತಿಳಿದುಬರಬೇಕು ಅಷ್ಟೇ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನಲ್ಲಿ ಅಕ್ರಮ ಮದ್ಯ ಸೇವನೆ ಪ್ರಕರಣ, ಮೃತರ ಸಂಖ್ಯೆ 47ಕ್ಕೆ ಏರಿಕೆ