ಬೆಂಗಳೂರು: ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ನಟ ದರ್ಶನ್ ಈಗ ಟ್ರೋಲ್ ಪೇಜ್ ಗಳಿಗೂ ಆಹಾರವಾಗಿದ್ದಾರೆ. ದರ್ಶನ್ ಪ್ರಕರಣದಲ್ಲಿ ಸಿಲುಕಿಕೊಳ್ಳದ ನಾಲ್ವರು ಅದೃಷ್ಟಶಾಲಿಗಳು ಇವರೇ ಎಂಬ ಪೋಸ್ಟ್ ಒಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ.
									
			
			 
 			
 
 			
					
			        							
								
																	ಸಾಮಾನ್ಯವಾಗಿ ದರ್ಶನ್ ತೋಟದ ಮನೆಗೆ ಹೋದರೂ ತಮ್ಮ ಜೊತೆ ಸ್ನೇಹಿತರ ಬಳಗವನ್ನು ಕರೆದೊಯ್ಯುತ್ತಿದ್ದರು. ಅವರಲ್ಲಿ ಹಾಸ್ಯ ನಟ ಚಿಕ್ಕಣ್ಣ, ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ ಇಲ್ಲವೇ ವಿನೋದ್ ಪ್ರಭಾಕರ್ ಯಾರಾದರೂ ಒಬ್ಬರು ಅವರ ಜೊತೆಗಿದ್ದೇ ಇರುತ್ತಿದ್ದರು.
									
										
								
																	ಆದರೆ ರೇಣುಕಾಸ್ವಾಮಿ ಹತ್ಯೆ ನಡೆದ ದಿನ ಶೆಡ್ ಗೆ ದರ್ಶನ್ ತೆರಳುವ ವೇಳೆ ಈ ನಾಲ್ವರು ನಟರಲ್ಲಿ ಯಾರೂ ಜೊತೆಗಿರಲಿಲ್ಲ ಎನ್ನುವುದೇ ಅವರ ಅದೃಷ್ಟ. ಒಂದು ವೇಳೆ ಇವರಲ್ಲಿ ಯಾರಾದರೂ ಇದ್ದಿದ್ದರೆ ಅವರು ಅರೆಸ್ಟ್ ಆಗುವುದರ ಜೊತೆಗೆ ಜೀವನಪೂರ್ತಿ ಕಳಂಕ ಅಂಟಿಕೊಳ್ಳುತ್ತಿತ್ತು.
									
											
							                     
							
							
			        							
								
																	ಹೀಗಾಗಿ ಕೆಲವು ಟ್ರೋಲಿಗರು ಇವರು ಅದೃಷ್ಟಶಾಲಿಗಳು ಎನ್ನುತ್ತಿದ್ದಾರೆ. ಹಾಗಿದ್ದರೂ ದರ್ಶನ್ ಅರೆಸ್ಟ್ ಆದ ಬೆನ್ನಲ್ಲೇ ಹೇಳಿಕೆ ನೀಡಿದ್ದ ನಟ ವಿನೋದ್ ಪ್ರಭಾಕರ್, ದರ್ಶನ್ ನನ್ನ ಅಣ್ಣನ ಸಮಾನ. ಅವರು ಏನೇ ಮಾಡಿದರೂ ಅವರಿಗೆ ಬೆಂಬಲವಾಗಿ ನಾನಿರುತ್ತೇನೆ ಎಂದಿದ್ದರು. ಇದಕ್ಕೂ ಅವರು ಸಾಕಷ್ಟು ಟೀಕೆಗೊಳಗಾಗಿದ್ದರು.