Select Your Language

Notifications

webdunia
webdunia
webdunia
webdunia

ನಾನಿನ್ನು ಹೇಗೆ ಮುಖ ತೋರಿಸಲಿ ಎನ್ನುತ್ತಿರುವ ದರ್ಶನ್, ಬಾಸ್ ನಂಬಿ ಜೀವನ ಹಾಳಾಯ್ತು ಎನ್ನುತ್ತಿರುವ ಗ್ಯಾಂಗ್

Darshan
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ಮತ್ತು ಸಹಚರರು ಈಗ ಕಂಬಿ ಹಿಂದೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ದರ್ಶನ್ ಪೊಲೀಸರ ಮುಂದೆಯೇ ತಮ್ಮಿಂದಾಗಿ ಅಭಿಮಾನಿಯ ಸಾವಾಯಿತಲ್ಲ ಎಂದು ಪಶ್ಚಾತ್ತಾಪ ಪಡುತ್ತಿದ್ದಾರಂತೆ. ಆದರೆ ಈಗ ಕಾಲ ಮೀರಿ ಹೋಗಿದೆ. ಎಲ್ಲಾ ಕಡೆ ತಮ್ಮ ಬಗ್ಗೆ ನೆಗೆಟಿವ್ ಕಾಮೆಂಟ್ ಗಳು ಕೇಳಿಬರುತ್ತಿರುವುದು ದರ್ಶನ್ ಗೂ ಧೃತಿಗೆಡಿಸಿದೆ. ಅಲ್ಲದೆಮ ನಿನ್ನೆ ಆರೋಪಿಗಳಲ್ಲಿ ಒಬ್ಬರಾದ ಅನುಕುಮಾರ್ ತಂದೆ ಇದೇ ನೋವಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ತಿಳಿದು ದರ್ಶನ್ ಮತ್ತು ಇತರರು ಇನ್ನಷ್ಟು ಕುಗ್ಗಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಇಂಡಸ್ಟ್ರಿಯಲ್ಲಿ ಇನ್ನು ಎಲ್ಲರನ್ನೂ ಹೇಗೆ ಫೇಸ್ ಮಾಡಲಿ, ಅಭಿಮಾನಿಗಳನ್ನು ಹೇಗೆ ಎದುರಿಸಲಿ. ನನ್ನಿಂದಾಗಿ ಇಷ್ಟು ಜನರ ಜೀವನ ಹಾಳಾಯ್ತು. ಒಬ್ಬ ಅಭಿಮಾನಿಯ ಸಾವಿಗೆ ನಾನೇ ಕಾರಣನಾದೆ ಎಂದು ದರ್ಶನ್ ಪಶ್ಚತ್ತಾಪ ಪಟ್ಟಿದ್ದಾರಂತೆ. ಇದರಿಂದಾಗಿ ಮಾನಸಿಕವಾಗಿಯೂ ಅವರು ಕುಗ್ಗಿ ಹೋಗಿದ್ದಾರಂತೆ.

ಇನ್ನು, ದರ್ಶನ್ ಜೊತೆ ಅರೆಸ್ಟ್ ಆಗಿರುವ ಆರೋಪಿಗಳೂ ಬೇಸರಪಟ್ಟುಕೊಳ್ಳುತ್ತಿದ್ದಾರೆ. ಬಾಸ್ ಬಾಸ್ ಎಂದು ಅವರಿಗಾಗಿ ಇಂತಹ ಕೆಲಸ ಮಾಡಿ ನಮ್ಮ ಜೀವನವೇ ಹಾಳಾಯ್ತು, ನಮ್ಮ ಕುಟುಂಬದವರೂ ನಮ್ಮನ್ನು ನಂಬುತ್ತಿಲ್ಲ, ಸಹಾಯಕ್ಕೆ ಬರುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರಂತೆ. ಕೆಟ್ಟ ಮೇಲೆ ಬುದ್ಧಿ ಬಂದು ಏನು ಪ್ರಯೋಜನ ಹೇಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಗ ಏಳಲು ಪವಿತ್ರಾ ಗೌಡ ತಕರಾರು, ಕಮಿಷನ್ ರಿಂದ ಕ್ಲಾಸ್