Select Your Language

Notifications

webdunia
webdunia
webdunia
webdunia

ದರ್ಶನ್ ರಿಂದಾಗಿ ಬ್ಯಾನ್ ಆಗಿದ್ದ ನಟಿ ನಿಖಿತಾ ತುಕ್ರಾಲ್ ಈಗ ಹೀಗಿದ್ದಾರೆ

Nikhita Tukral

Krishnaveni K

ಬೆಂಗಳೂರು , ಮಂಗಳವಾರ, 18 ಜೂನ್ 2024 (12:24 IST)
Photo Credit: Facebook
ಬೆಂಗಳೂರು: ನಟ ದರ್ಶನ್ ರಿಂದಾಗಿ ಚಿತ್ರರಂಗದಿಂದ ಬ್ಯಾನ್ ಆಗಿದ್ದ ನಟಿ ನಿಖಿತಾ ತುಕ್ರಾಲ್ ಇಂದು ಹೇಗಿದ್ದಾರೆ ಗೊತ್ತಾ? ಚಿತ್ರರಂಗದಿಂದ ದೂರವಾದ ಮೇಲೆ ಅವರ ನಸೀಬೇ ಬದಲಾಗಿದೆ.
 

ಹಿಂದೆ ನಟ ದರ್ಶನ್ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾದಾಗ ನಟಿ ನಿಖಿತಾ ತುಕ್ರಾಲ್ ಹೆಸರು  ಕೇಳಿಬಂದಿತ್ತು. ನಟಿ ನಿಖಿತಾ ಜೊತೆಗೆ ನಿಕಟವಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಂದು ದರ್ಶನ್ ಪತ್ನಿ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದರೂ ಬ್ಯಾನ್ ಆಗಿರಲಿಲ್ಲ. ಆದರೆ ನಿಖಿತಾರನ್ನು ಚಿತ್ರರಂಗ ಬ್ಯಾನ್ ಮಾಡಿದ್ದು ಸಾಕಷ್ಟು ವಿವಾದಕ್ಕೊಳಗಾಗಿತ್ತು.

ಇದೆಲ್ಲಾ ರಗಳೆಗಳ ಬಳಿಕ ನಿಖಿತಾ ನಿಧಾನವಾಗಿ ಚಿತ್ರರಂಗದಿಂದ ದೂರವಾದರು. ನಿಖಿತಾಗೆ ಈಗ 42 ವರ್ಷ. 2018 ರ ಬಳಿಕ ಅವರು ಸಿನಿಮಾಗಳಿಂದ ದೂರವೇ ಉಳಿದರು. 2017 ರಲ್ಲಿ ಉದ್ಯಮಿ ಗಗನದೀಪ್ ಸಿಂಗ್ ಎಂಬವರ ಜೊತೆ ಮದುವೆಯಾದರು. ಆ ಬಳಿಕ ಅವರು ಸಂಪೂರ್ಣವಾಗಿ ಚಿತ್ರರಂಗದಿಂದ ದೂರವಾದರು.

ಇದೀಗ ನಿಖಿತಾಗೆ ಒಬ್ಬ ಮುದ್ದಾದ ಮಗಳಿದ್ದಾಳೆ. ಅವರೂ ಕೂಡಾ ಈಗ ಉದ್ಯಮಿ. ತಮ್ಮದೇ ಜಾಸ್ಮಿನ್ ಕ್ರಿಯೇಷನ್ಸ್ ಎಂಬ ಬಟ್ಟೆ ಉದ್ಯಮ ಹೊಂದಿದ್ದಾರೆ. ಇದರ ರಾಯಭಾರಿಯೂ ಅವರೇ ಆಗಿದ್ದಾರೆ. ಚಿತ್ರರಂಗದಿಂದ ದೂರವಿರುವ ನಿಖಿತಾ ಈಗ ಉದ್ಯಮ, ಮನೆ ಎಂದು ತಮ್ಮದೇ ಲೋಕದಲ್ಲಿ ಹಾಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯಲಕ್ಷ್ಮಿಯಿಂದ ದರ್ಶನ್ ಎಷ್ಟೆಲ್ಲಾ ಅನುಭವಿಸಿದ್ದಾರೆ ನೆನೆಸಿಕೊಳ್ಳಿ ಎಂದು ಟಾಂಗ್ ಕೊಟ್ಟಿದ್ದ ಪವಿತ್ರಾ ಗೌಡ