ಬೆಂಗಳೂರು: ಒಂದೆಡೆ ಪತ್ನಿ, ಇನ್ನೊಂದೆಡೆ ಗೆಳತಿ. ಗೆಳತಿಯಿಂದಾಗಿ ಜೈಲು ಸೇರಿದ ನಟ ದರ್ಶನ್ ರನ್ನು ಬಿಡಿಸಿಕೊಳ್ಳಲು ಈಗ ಪತ್ನಿ ವಿಜಯಲಕ್ಷ್ಮಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
									
			
			 
 			
 
 			
					
			        							
								
																	ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪತಿ ದರ್ಶನ್ ಪೊಲೀಸರಿಂದ ಬಂಧಿಯಾಗುತ್ತಿದ್ದಂತೇ ವಿಜಯಲಕ್ಷ್ಮಿ ತೀರಾ ಶಾಕ್ ಗೊಳಗಾಗಿದ್ದರು. ಏನಾಗುತ್ತಿದೆ ಎಂದು ತಿಳಿಯದೇ ಅವರು ಸೋಷಿಯಲ್ ಮೀಡಿಯಾದಿಂದಲೂ ದೂರವುಳಿದರು. ಪವಿತ್ರಾ ಗೌಡರಿಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ದರ್ಶನ್ ತಮ್ಮ ಸಹಚರರೊಂದಿಗೆ ರೇಣುಕಾಸ್ವಾಮಿಗೆ ಪಾಠ ಕಲಿಸಲು ಹೋಗಿ ಆತನ ಜೀವಕ್ಕೇ ಸಂಚಕಾರ ತಂದಿಟ್ಟಿದ್ದರು.
									
										
								
																	ಪತಿಯ ಬಂಧನದಿಂದ ಆಘಾತಕ್ಕೊಳಗಾದ ವಿಜಯಲಕ್ಷ್ಮಿ ಇದುವರೆಗೆ ಸಾರ್ವನಿಕವಾಗಿ ಕಾಣಿಸಿಕೊಂಡಿಲ್ಲ. ಆದರೆ ಇದೀಗ ತಮ್ಮ ಪತಿಯ ಬಿಡುಗಡೆಗೆ ತೆರೆಮರೆಯಲ್ಲಿದ್ದುಕೊಂಡೇ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ನಟ ದರ್ಶನ್ ಈಗ ಪೊಲೀಸರ ಕಸ್ಟಡಿಯಲ್ಲಿದ್ದಾರೆ.
									
											
							                     
							
							
			        							
								
																	ಅವರು ಇನ್ನೆರಡು ದಿನಗಳಲ್ಲಿ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಆಗ ಒಂದು ವೇಳೆ ನ್ಯಾಯಾಂಗ ಬಂಧನ ವಿಧಿಸಿದರೆ ಜಾಮೀನಿಗೆ ಅರ್ಜಿ ಹಾಕಬಹುದು ಎಂಬುದು ಅವರ ಪರ ವಕೀಲರ ಯೋಜನೆ. ಈ ನಡುವೆ ವಿಜಯಲಕ್ಷ್ಮಿ ಪತಿ ದರ್ಶನ್ ಕೇಸ್ ವಾದಿಸಲು ಹಿರಿಯ ವಕೀಲ ರವಿ ಬಿ ನಾಯ್ಕ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಖ್ಯಾತ ವಕೀಲರ ಮೂಲಕವೇ ದರ್ಶನ್ ಕೇಸ್ ವಾದಿಸಲು ವಿಜಯಲಕ್ಷ್ಮಿ ಯೋಜನೆ ರೂಪಿಸಿದ್ದಾರೆ. ಎಲ್ಲಾ ಸಾಕ್ಷ್ಯಗಳು ದರ್ಶನ್ ವಿರುದ್ಧ ಇರುವ  ಕಾರಣ ಅವರನ್ನು ಬಿಡುಗಡೆ ಮಾಡುವುದು ಅಷ್ಟು ಸುಲಭವಲ್ಲ.ಹೀಗಾಗಿ ಹಿರಿಯ ವಕೀಲರನ್ನೇ ವಿಜಯಲಕ್ಷ್ಮಿ ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ.