Select Your Language

Notifications

webdunia
webdunia
webdunia
webdunia

ತಮ್ಮ ಪ್ರಜ್ವಲ್ ಸೆಲ್ ನಲ್ಲೇ ಸೂರಜ್ ರೇವಣ್ಣ: ಅಣ್ತಮ್ಮಾಸ್ ನ ನೆರೆಯ ಸೆಲ್ ನಲ್ಲಿರೋದು ಈತನೇ

Prajwal Revanna-Suraj revanna

Krishnaveni K

ಬೆಂಗಳೂರು , ಸೋಮವಾರ, 1 ಜುಲೈ 2024 (12:18 IST)
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಜೆಡಿಎಸ್ ನಾಯಕರಾದ, ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಸಹೋದರರು ಈಗ ಒಂದೆ ಸೆಲ್ ನಲ್ಲಿದ್ದಾರೆ. ಆದರೆ ಅವರ ಪಕ್ಕದ ಸೆಲ್ ನಲ್ಲಿ ಇನ್ನೊಬ್ಬ ಖತರ್ನಾಕ್ ಆರೋಪಿಯಿದ್ದಾನೆ.

ಪ್ರಜ್ವಲ್ ರೇವಣ್ಣ ಮಹಿಳೆಯರರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತ ಸೂರಜ್ ರೇವಣ್ಣ ಜೆಡಿಎಸ್ ಕಾರ್ಯಕರ್ತ ಯುವಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈಗ ಅಣ್ಣ-ತಮ್ಮ ಇಬ್ಬರನ್ನೂ ಒಂದೇ ಸೆಲ್ ನಲ್ಲಿ ಕೂಡಿ ಹಾಕಲಾಗಿದೆ ಎನ್ನುವ ಮಾಹಿತಿಯಿದೆ. ವಿಶೇಷವೆಂದರೆ ಇವರ ಪಕ್ಕದ ಸೆಲ್ ನಲ್ಲೇ ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಿ ಆಂಡ್ ಗ್ಯಾಂಗ್ ನ್ನು ಇರಿಸಲಾಗಿದೆ. ಸೂರಜ್ ಮತ್ತು ಪ್ರಜ್ವಲ್ ಜೊತೆಯಾಗಿ ವಾಕಿಂಗ್ ಮಾಡುತ್ತಿದ್ದಾರೆ.

ಉಳಿದ ಕೈದಿಗಳ ಜೊತೆಯೂ ಅಣ್ತಮ್ಮಾಸ್ ಹೆಚ್ಚು ಬೆರೆಯುತ್ತಿಲ್ಲ ಎನ್ನಲಾಗಿದೆ. ಪಕ್ಕದ ಸೆಲ್ ನಲ್ಲೇ ಇರುವ ಶ್ರೀಕಿ ಗ್ಯಾಂಗ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.  ಪ್ರಜ್ವಲ್ ಮತ್ತು ಸೂರಜ್ ಪರಸ್ಪರ ತಮ್ಮಷ್ಟಕ್ಕೇ ಮಾತುಕತೆ ನಡೆಸುತ್ತಿದ್ದಾರೆ ಮತ್ತು ವಾಕಿಂಗ್ ಅಥವಾ ಪೇಪರ್ ಓದಿಕೊಂಡು ಸಮಯ ಕಳೆಯುತ್ತಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನೀವು ಚಪ್ಪರಿಸಿಕೊಂಡು ತಿನ್ನುವ ಪಾನಿಪೂರಿಗೆ ನಿಷೇಧ, ಇಂದು ನಿರ್ಧಾರ