Select Your Language

Notifications

webdunia
webdunia
webdunia
webdunia

2 ಗಂಟೆ ಕಾದು ಕುಳಿತ ನಟ ಧನ್ವೀರ್‌ ಭೇಟಿಗೆ ನೋ ಎಂದ್ರಾ ದಾಸ

2 ಗಂಟೆ ಕಾದು ಕುಳಿತ ನಟ ಧನ್ವೀರ್‌ ಭೇಟಿಗೆ ನೋ ಎಂದ್ರಾ ದಾಸ

Sampriya

ಬೆಂಗಳೂರು , ಮಂಗಳವಾರ, 2 ಜುಲೈ 2024 (15:08 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ​ ದರ್ಶನ್ ಅವರನ್ನು ಭೇಟಿಯಾಗಲು ತಾರೆಯರು ಆಗಮಿಸುತ್ತಿದ್ದಾರೆ.

ಅದರಂತೆ ಇಂದು ದರ್ಶನ್ ಅವರ ಆಪ್ತ, ನಟ ಧನ್ವೀರ್ ಆಗಮಿಸಿದ್ದಾರೆ. ಆದರೆ ಅವರಿಗೆ ಜೈಲಿನೊಳಗೆ ಎಂಟ್ರಿ ಸಿಕ್ಕಿಲ್ಲ ಎಂಬ ಮಾಹಿತಿಯಿದೆ. ಇದರಿಂದ ನಟ ದರ್ಶನ್​ ಭೇಟಿ ಅವರಿಗೆ ಸಾಧ್ಯವಾಗಿಲ್ಲ. ಇನ್ನೂ ಕಳೆದ ಕೆಲ ದಿನಗಳಿಂದ ದರ್ಶನ್ ಅವರನ್ನು ಭೇಟಿಯಾಗಲು ಅವರ ಅಭಿಮಾನಿಗಳು, ಆಪ್ತ ವಲಯದವರು ಪರಪ್ಪನ ಅಗ್ರಹಾರದತ್ತ ಬರುತ್ತಿದ್ದಾರೆ. ಆದರೆ ಜೈಲು ಅಧಿಕಾರಿಗಳು ಅವರ ಕುಟುಂಬದವರಿಗೆ ಮಾತ್ರ ಅವಕಾಶವನ್ನು ನೀಡಿದ್ದಾರೆ.

ನಿನ್ನೆ ದರ್ಶನ್ ಅವರ ತಾಯಿ, ಸಹೋದರ ದಿನಕರ್ ತೂಗುದೀಪ, ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಅವರು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.  ಇಂದು ಪರಪ್ಪನ ಅಗ್ರಹಾರ ಜೈಲು ಒಳಕ್ಕೆ ಹೋಗಲು ಧನ್ವೀರ್ ಕಾರಿನಲ್ಲಿ ಬಂದಿದ್ದಾರೆ. ಆದರೆ ಈ ವೇಳೆ ಜೈಲು ಸಿಬ್ಬಂದಿ ಅವರ ಕಾರನ್ನು ತಡೆದು ನಿಲ್ಲಿಸಿದ್ದಾರೆ.

ಬಳಿಕ ಧನ್ವೀರ್​ ದರ್ಶನ್​ ಭೇಟಿಗಾಗಿ ಕಾದು ಕುಂತಿದ್ದಾರೆ. ದರ್ಶನ್ ಭೇಟಿಗೆ ಸಮ್ಮತಿಸಿದರೆ ಒಳಗೆ ಹೋಗಲು ಕಾದಿದ್ದಾರೆ. ಆದರೆ ಕೊಂಚ ಸಮಯದ ಬಳಿಕ ಕಾರಿನಿಂದ ಕೆಳಗಿಳಿದ ನಟ ಜೈಲಿನ ಬಳಿ ನಡೆದುಕೊಂಡು ಹೋಗಿದ್ದಾರೆ.

ಮಾಹಿತಿ ಪ್ರಕಾರ ಧನ್ವೀರ್​ 2 ಗಂಟೆಗಳ ಕಾಲ ದರ್ಶನ್​ ಭೇಟಿಗಾಗಿ ಕಾದಿದ್ದಾರೆ. ನಂತರ ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.. ಇದಲ್ಲದೆ, ನಟ ವಿನೋದ್​ ಪ್ರಭಾಕರ್​, ಜೋಗಿ ಪ್ರೇಮ್​, ರಕ್ಷಿತಾ ಪ್ರೇಮ್​ ಸೇರಿ ಕೆಲವರು ಈಗಾಗಲೇ ದರ್ಶನ್​ರನ್ನು ಭೇಟಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಡವ ಶೈಲಿಯಲ್ಲೇ ತಾಯಿಯಾಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡ ನಟಿ ಹರ್ಷಿಕಾ ಪೂಣಚ್ಚ