Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ದರ್ಶನ್ ಜೈಲಿಗೆ ಹೋಗಿದ್ದೇ ಕಾರಣ

T20 World Cup 2024

Sampriya

: 2011ರಲ್ಲಿ ನಟ ದರ್ಶನ್ , ಬಿಜೆಪಿ ಹಿರಿಯ , ಭಾನುವಾರ, 30 ಜೂನ್ 2024 (16:07 IST)
ಬೆಂಗಳೂರು:  2011ರಲ್ಲಿ ನಟ ದರ್ಶನ್ , ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಜೈಲು ಸೇರಿದ್ದಾಗ ಭಾರತ ವಿಶ್ವಕಪ್ ಗೆದ್ದಿತ್ತು. ಇನ್ನೂ ಅಚ್ಚರಿ ಏನೆಂದರೆ ಈ ಬಾರಿಯೂ ಇವರಿಬ್ಬರು ಬೇರೆ ಬೇರೆ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವಾಗ ಟೀಂ ಇಂಡಿಯಾ 13 ವರ್ಷಗಳ ನಂತರ ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿರುವುದನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಈ ಬಾರಿಯೂ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾದರೆ, ಮಾಜಿ ಸಿಎಂ ಯಡಿಯೂರಪ್ಪ ಅವರು ಪೋಕ್ಸೋ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದಾರೆ.

ಅದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಗಳು ವೈರಲ್ ಆಗಿದ್ದು, ಕೆಲವರು ಈ ಬಾರಿಯೂ ದರ್ಶನ್, ಬಿಎಸ್ ಯಡಿಯೂರಪ್ಪ ತನಿಖೆ ಎದುರಿಸುತ್ತಿದ್ದು ಭಾರತ ಪ್ರಶಸ್ತಿ ಗೆಲ್ಲುವ ಸಾಧ್ಯತೆಯಿದೆಯಾ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಕೆಲವರು ನಾನು ಒಂದು ಮಾತು ಹೇಳಿದ್ದೆ. 2011ರಲ್ಲಿ ದರ್ಶನ್ ಮತ್ತು ಬಿಎಸ್ ಯಡಿಯೂರಪ್ಪ ಮೇಲೆ ಕೇಸ್ ಆದಾಗ ವಿಶ್ವಕಪ್ ಗೆದ್ದಿತ್ತು. ಈ ಬಾರಿಯೂ ಇಬ್ಬರ ಮೇಲೂ ಕೇಸ್ ಇದೆ. ಭಾರತಕ್ಕೆ ವಿಶ್ವಕಪ್ ಸಿಗುತ್ತಾ ಅಂತ ನೋಡಿ, ಇವಾಗ ನಾನ್ ಹೇಳಿದ್ದು ನಿಜ ಆಯ್ತು ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ನಟ ದರ್ಶನ್ ಅವರು 2011ರಲ್ಲಿ ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದರೆ, ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು  ಭೂ ಹಗರಣ ಸಂಬಂಧ ಜೈಲು ಸೇರಿದ್ದರು.ಇನ್ನೂ ಈ ಬಾರಿ ನಟ ದರ್ಶನ್ ಅವರು ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪೋಕ್ಸೋ ಪ್ರಕರಣದಡಿ ಬಂಧನದ ಭೀತಿಯಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಅಪರಂಜಿ, ಪುಣ್ಯಾತ್ಮನಿಗಾಗಿ ಹಾರೈಸೋಣ ಎಂದ ಕನ್ನಡದ ಖ್ಯಾತ ಗಾಯಕಿ