Select Your Language

Notifications

webdunia
webdunia
webdunia
webdunia

ಕೊಡವ ಶೈಲಿಯಲ್ಲೇ ತಾಯಿಯಾಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡ ನಟಿ ಹರ್ಷಿಕಾ ಪೂಣಚ್ಚ

Harshika Poonaccha

Krishnaveni K

ಬೆಂಗಳೂರು , ಮಂಗಳವಾರ, 2 ಜುಲೈ 2024 (10:55 IST)
Photo Credit: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ತಾವು ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕೊಡವ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಕೊಂಡು ಗುಡ್ ನ್ಯೂಸ್ ನೀಡಿದ್ದಾರೆ.

ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಇಬ್ಬರೂ ಕೊಡವ ಮೂಲದವರು. ಕೊಡವ ಶೈಲಿಯಲ್ಲೇ ಇವರ ಮದುವೆ ಕಾರ್ಯಕ್ರಮಗಳೂ ನಡೆದಿದ್ದವು. ಕಳೆದ ವರ್ಷ ಆಗಸ್ಟ್ ನಲ್ಲಿ ಇಬ್ಬರ ಮದುವೆ ಕೊಡಗಿನಲ್ಲೇ ನಡೆದಿತ್ತು. ಸಾಕಷ್ಟು ಸ್ಯಾಂಡಲ್ ವುಡ್ ತಾರೆಯರು, ರಾಜಕೀಯ ಗಣ್ಯರೂ ಮದುವೆಗೆ ಆಗಮಿಸಿದ್ದರು.

ಇದೀಗ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ತಾವು ಗರ್ಭಿಣಿಯಾಗಿರುವ ವಿಚಾರವನ್ನು ಹರ್ಷಿಕಾ ವಿಭಿನ್ನವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ಭುವನ್, ತಾಯಿ ಹಾಗೂ ಅತ್ತೆ-ಮಾವನ ಜೊತೆ ತಾವೂ ಸಾಂಪ್ರದಾಯಿಕ ಕೊಡವ ಡ್ರೆಸ್ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡು ತಾಯಿಯಾಗುತ್ತಿರುವ ವಿಚಾರ ತಿಳಿಸಿದ್ದಾರೆ.

‘ಇಂದಿನವರೆಗೂ ಸಮ್ಮಿಬ್ಬರಿಗೆ ಸದಾ ಆಶೀರ್ವಾದ ಮಾಡುತ್ತಾ ಬಂದಿದ್ದೀರಿ. ಇನ್ನು ಮುಂದೆ ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಈ ಒಂದು ಪುಟ್ಟ ಜೀವದ ಮೇಲೂ ಇರಲಿ. ಅಕ್ಟೋಬರ್ ಗೆ ಕಾತುರದಿಂದ ಕಾಯುತ್ತಿದ್ದೇವೆ’ ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮಾಡರ್ನ್ ಆಗಿ ಡ್ರೆಸ್ ಮಾಡಿಕೊಂಡು ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಆದರೆ ಹರ್ಷಿಕಾ ದಂಪತಿ ಸಾಂಪ್ರದಾಯಿಕ ಉಡುಗೆ ತೊಟ್ಟು ಕೊಡವರ ಸಾಂಪ್ರದಾಯಿಕ ಮನೆಯಲ್ಲಿಯೇ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಬಗ್ಗೆ ಕೊನೆಗೂ ಮೌನ ಮುರಿದ ಸುಮಲತಾ: ಆದರೂ ನೇರಾನೇರ ಇಲ್ಲ