Select Your Language

Notifications

webdunia
webdunia
webdunia
Saturday, 12 April 2025
webdunia

ಕೊಡಗು ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಹತ್ಯೆ: ಮರದ ಮೇಲಿತ್ತು ರುಂಡ!

Crime

Krishnaveni K

ಮಡಿಕೇರಿ , ಶನಿವಾರ, 11 ಮೇ 2024 (15:49 IST)
ಮಡಿಕೇರಿ: ಸೋಮಾರಪೇಟೆಯ ಸೊರ್ಲಬ್ಬಿ ಗ್ರಾಮದ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಮೀನಾ ಹತ್ಯೆ ಮಾಡಿದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಬಾಲಕಿಯ ರುಂಡ ಕತ್ತರಿಸಿದ್ದ ಹಂತಕ ಅದನ್ನು ಮರದ ಮೇಲೆ ನೇತು ಹಾಕಿದ್ದ. ಅದೀಗ ಪತ್ತೆಯಾಗದೆ.

ಬಾಲಕಿಯನ್ನು ಮನೆಯಿಂದ ಕೆಲವು ದೂರ ಎಳೆದೊಯ್ದಿದ್ದ ಆರೋಪಿ ಪ್ರಕಾಶ್ ಆಕೆಯ ರುಂಡ ಕತ್ತರಿಸಿ ಹತ್ಯೆ ಮಾಡಿದ್ದ. ಹುಡುಕಾಟ ನಡೆಸಿದ್ದಾಗ ಪೊಲೀಸರಿಗೆ ಆಕೆಯ ದೇಹ ಮಾತ್ರ ಸಿಕ್ಕಿತ್ತು. ರುಂಡ ಎಲ್ಲೂ ಸಿಕ್ಕಿರಲಿಲ್ಲ. ಇದೀಗ ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್ ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಈ ವೇಳೆ ಬಾಲಕಿಯ ರುಂಡ ಎಲ್ಲಿದೆ ಎಂಬ ವಿಚಾರ ಆತ ಬಾಯ್ಬಿಟ್ಟಿದ್ದ. ಹತ್ಯೆ ಮಾಡಿದ ಸ್ಥಳದಲ್ಲಿಯೇ ಮರದ ಮೇಲೆ ರುಂಡ ನೇತು ಹಾಕಿದ್ದ. ಸ್ಥಳ ಮಹಜರು ನಡೆಸುವಾಗ ಪೊಲೀಸರಿಗೆ ರುಂಡವಿರುವ ಜಾಗ ತೋರಿಸಿದ್ದ. ಈತನ ಕೃತ್ಯಕ್ಕೆ ಪೊಲೀಸರಿಗೆ ಬೆಚ್ಚಿಬಿದ್ದಿದ್ದಾರೆ.

ಬಳಿಕ ಪೊಲೀಸರು ಆರೋಪಿ ಪ್ರಕಾಶ್ ಮತ್ತು ಬಾಲಕಿಯ ರುಂಡದ ಜೊತೆಗೆ ಆಕೆಯ ಮನೆಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಮೃತ ಬಾಲಕಿಯ ಸಹೋದರ ರುಂಡ ಗುರುತಿಸಿದ್ದ. ಆರೋಪಿಯನ್ನು ನೋಡುತ್ತಿದ್ದಂತೇ ಆಕ್ರೋಶಗೊಂಡ ಆತ ಗನ್ ಹಿಡಿದು ಆರೊಪಿಯನ್ನು ಸಾಯಿಸಲು ಪ್ರಯತ್ನ ಪಟ್ಟಿದ್ದಾನೆ. ಬಳಿಕ ಪೊಲೀಸರು ತಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಕನ್ನಡ ಶುದ್ಧವಾಗಿ ಓದಲು ಬರುವುದಿಲ್ಲ: ಸಚಿವ ಮಧು ಬಂಗಾರಪ್ಪ