Daily Horoscope

Select Your Language

Notifications

webdunia
webdunia
webdunia
webdunia

ಗಂಡನ ಖಾಸಗಿ ಅಂಗಾಂಗ ಕುಯ್ದು ಚಿತ್ರಹಿಂಸೆ ನೀಡಿದ ಮುಸ್ಲಿಂ ಮಹಿಳೆ

Crime
ಲಕ್ನೋ: ಗಂಡನ ಖಾಸಗಿ ಅಂಗಾಂಗವನ್ನು ಕುಯ್ದು ಚಿತ್ರಹಿಂಸೆ ನೀಡಿದ ಮುಸ್ಲಿಂ ಮಹಿಳೆಯೊಬ್ಬಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಗಂಡನನ್ನು ಬೆತ್ತಲು ಮಾಡಿ ಆತನ ಖಾಸಗಿ ಅಂಗಾಗವನ್ನು ಕುಯ್ದು, ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾಳೆ. ಈಕೆಯ ಕೃತ್ಯದ ಬಗ್ಗೆ ಈಗ ಗಂಡ ಮತ್ತು ಆತನ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ನಿಯ ಚಿತ್ರಹಿಂಸೆ ತಾಳಲಾರದೇ ಬೆಡ್ ರೂಂಗೆ ಆತ ಸಿಸಿಟಿವಿ ಅಳವಡಿಸಿದ್ದ.

ಮದ್ಯಪಾನ, ಧೂಮಪಾನ ಮಾಡುತ್ತಿದ್ದ ಮಹಿಳೆ ಚಿತ್ರಹಿಂಸೆ ನೀಡುತ್ತಿದ್ದಳು. ಪತಿಗೆ ಮತ್ತು ಬರಿಸುವ ಔಷಧಿ ಹಾಕಿದ ಪಾನೀಯ ನೀಡಿ ಮಂಚದಲ್ಲಿ ಬೆತ್ತಲೆ ಮಲಗಿಸಿ ಚಿತ್ರಹಿಂಸೆ ನೀಡುತ್ತಿದ್ದಳು. ಆತ ಎಷ್ಟೇ ಕಿರುಚಾಡಿದರೂ ಕರುಣೆ ತೋರಿಸುತ್ತಿರಲಿಲ್ಲ. ಸೊಸೆಯ ಹೇಯ ಕೃತ್ಯದ ಬಗ್ಗೆ ತಾಯಿಯೂ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರೀತಿ ಮಾಡುತ್ತಿದ್ದ ಇಬ್ಬರೂ ಕಳೆದ ವರ್ಷ ಮದುವೆ ಮಾಡಿಕೊಂಡಿದ್ದರು. ಮಲಗುವ ಕೋಣೆಯಲ್ಲಿ ಪತ್ನಿ ಮಾಡುತ್ತಿದ್ದ ವಿಲಕ್ಷಣ ಕೃತ್ಯದಿಂದ ಗಂಡ ಬೇಸತ್ತಿದ್ದ. ಇದೀಗ ಪೊಲೀಸರು ಸಿಸಿಟಿವಿ ದೃಶ್ಯ ಮತ್ತು ಗಂಡನ ಹೇಳಿಕೆ ಆಧರಿಸಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತದಾನ ಮಾಡಿದವರಿಗೆ ಎಣ್ಣೆಗೆ ಡಿಸ್ಕೌಂಟ್! ಹುಬ್ಬಳ್ಳಿಯಲ್ಲಿ ಭರ್ಜರಿ ಆಫರ್