Select Your Language

Notifications

webdunia
webdunia
webdunia
webdunia

ಉತ್ತರ ಪತ್ರಿಕೆಯಲ್ಲಿ ಜೈಶ್ರೀರಾಮ್ ಎಂದು ಬರೆದವನಿಗೆ ಅಂಕ: ಪ್ರಾಧ್ಯಾಪಕ ಅಮಾನತು

Exam

Krishnaveni K

ಲಕ್ನೋ , ಶನಿವಾರ, 27 ಏಪ್ರಿಲ್ 2024 (10:58 IST)
ಲಕ್ನೋ: ಉತ್ತರ ಪ್ರದೇಶದ ವಿಶ್ವಿವಿದ್ಯಾನಿಲಯವೊಂದರಲ್ಲಿ ಜೈ ಶ್ರೀರಾಮ್ ಎಂದು ಬರೆದ ವಿದ್ಯಾರ್ಥಿಯೊಬ್ಬನಿಗೆ ಅಂಕ ನೀಡಿದ್ದಕ್ಕಾಗಿ ಪ್ರಾಧ‍್ಯಾಪಕರೊಬ್ಬರು ಅಮಾನತಾಗಿದ್ದಾರೆ.

ಪರೀಕ್ಷೆಯಲ್ಲಿ ಉತ್ತರ ಬರೆಯುವ ಬದಲು ಜೈಶ್ರೀರಾಮ್ ಮತ್ತು ಕ್ರಿಕೆಟಿಗರ ಹೆಸರು ಬರೆದಿದ್ದಾನೆ. ಇದಕ್ಕೆ ಅಧ್ಯಾಪಕರೂ ಅಂಕ ನೀಡಿದ್ದಾರೆ. ಹಣ ಪಡೆದು ಈ ರೀತಿ ಅಂಕ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.

ಜೌನ್ ಪುರದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ‍್ಯಾಪಕರನ್ನು ಘಟನೆ ಸಂಬಂಧ ಅಮಾನತುಗಳಿಸಲಾಗಿದೆ. ವಿಶ್ವ ವಿದ್ಯಾಲಯವು ಅಧಿಕಾರಿಗಳ ಸಹಾಯದಿಂದ ಸೊನ್ನೆ ಸುತ್ತಿದ್ದ ವಿದ್ಯಾರ್ಥಿಗಳಿಗೂ 60% ಮಾರ್ಕ್ಸ್ ನೀಡಿ ಪಾಸ್ ಮಾಡಿತ್ತು. ಈ ಸಂಬಂಧ ವಿವಿಯ ವಿದ್ಯಾರ್ಥಿ ಮುಖಂಡ ಮುಖ್ಯಮಂತ್ರಿ, ರಾಜ್ಯಪಾಲರು, ಉಪಕುಲಪತಿಗಳಿಗೆ ಪತ್ರ ಬರೆದು ದೂರು ನೀಡಿದ್ದರು.

ಇದೀಗ ದೂರಿನ ಬೆನ್ನಲ್ಲೇ ಉಪಕುಲಪತಿಗಳು ಪ್ರತ್ಯೇಕ ಸಮಿತಿ ರಚಿಸಿ ತನಿಖೆಗೆ ಮುಂದಾಗಿದ್ದಾರೆ. ಅಲ್ಲದೆ ಇಂತಹ  ಘಟನೆ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ಮುಂದಾಗಿದ್ದಾರೆ. ಸದ್ಯಕ್ಕೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಅದಾದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಉಪಕುಲಪತಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ, ನಾಡಿದ್ದು ಉತ್ತರ ಕರ್ನಾಟಕದಲ್ಲಿ ಮೋದಿ-ಸಿದ್ದರಾಮಯ್ಯ ಜಟಾಪಟಿ