Select Your Language

Notifications

webdunia
webdunia
webdunia
webdunia

ಮತದಾನ ಮಾಡಿದವರಿಗೆ ಎಣ್ಣೆಗೆ ಡಿಸ್ಕೌಂಟ್! ಹುಬ್ಬಳ್ಳಿಯಲ್ಲಿ ಭರ್ಜರಿ ಆಫರ್

Alcohol

Krishnaveni K

ಹುಬ್ಬಳ್ಳಿ , ಸೋಮವಾರ, 6 ಮೇ 2024 (12:40 IST)
ಹುಬ್ಬಳ್ಳಿ: ನಾಳೆ ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯಲಿದ್ದು, ಹುಬ್ಬಳ್ಳಿಯಲ್ಲೂ ನಾಳೆ ಮತದಾನ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಹುಬ್ಬಳ್ಳಿಯ ಬಾರ್ ಮಾಲಿಕರೊಬ್ಬರು ಎಣ್ಣೆ ಪ್ರಿಯರಿಗೆ ಭರ್ಜರಿ ಆಫರ್ ನೀಡಿದ್ದಾರೆ.

ಮತದಾನ ಮಾಡಿದವರಿಗೆ ಊಟ, ತಿಂಡಿ ಫ್ರೀ ಕೊಡುವ ಘಟನೆಗಳನ್ನು ನೋಡಿದ್ದೇವೆ. ಇದೀಗ ಹುಬ್ಬಳ್ಳಿಯ ಬಾರ್ ಮಾಲಿಕರೊಬ್ಬರು ಮತದಾನ ಮಾಡಿ ಬಂದು ಗುರುತಿನ ಚೀಟಿ ತೋರಿಸುವ ಮತದಾರರಿಗೆ ರಿಯಾಯಿತಿ ದರದಲ್ಲಿ ಮದ್ಯ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಬಾರ್ ಮಾಲಿಕರು ದೊಡ್ಡ ಆಫರ್ ನೀಡಿದ್ದಾರೆ. ಹುಬ್ಬಳ‍್ಳಿಯ ಕುಸುಗಲ್ ರಸ್ತೆಯಲ್ಲಿರುವ ಕರ್ನಾಟಕ ವೈನ್ಸ್ ಅಂಗಡಿ ಮಾಲಿಕರು ಮತದಾನ ಮಾಡಿದ ಗುರುತಿನ ಚೀಟಿ ತೋರಿಸಿದವರಿಗೆ ಶೇ.3 ರಷ್ಟು ರಿಯಾಯಿತಿ ದರದಲ್ಲಿ ಮದ್ಯ ನೀಡುವುದಾಗಿ ಘೋಷಿಸಿದ್ದಾರೆ.

ಈ ಮೊದಲು ಬೆಂಗಳೂರಿನಲ್ಲಿ ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ನಡೆದಿದ್ದಾಗ ಹೋಟೆಲ್ ನಲ್ಲಿ ಉಚಿತ ಊಟ, ಜ್ಯೂಸ್ ನೀಡಲಾಗಿತ್ತು. ಆದರೆ ಹುಬ್ಬಳ್ಳಿಯ ಈ ಬಾರ್ ಮಾಲಿಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಿಯಾಯಿತಿ ದರದಲ್ಲಿ ಮದ್ಯ ನೀಡಲು ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವಾಗ್ಲೂ ಬಿಳಿ ಶರ್ಟ್ ನ್ನೇ ತೊಡುವುದು ಯಾಕೆ? ರಾಹುಲ್ ಗಾಂಧಿ ಉತ್ತರ