Select Your Language

Notifications

webdunia
webdunia
webdunia
webdunia

ಯಾವಾಗ್ಲೂ ಬಿಳಿ ಶರ್ಟ್ ನ್ನೇ ತೊಡುವುದು ಯಾಕೆ? ರಾಹುಲ್ ಗಾಂಧಿ ಉತ್ತರ

Rahul Gandhi

Krishnaveni K

ನವದೆಹಲಿ , ಸೋಮವಾರ, 6 ಮೇ 2024 (12:30 IST)
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಎಲ್ಲೇ ಹೋಗುವುದಿದ್ದರೂ ಬಿಳಿ ಟಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸುತ್ತಾರೆ. ಅವರ ಡ್ರೆಸ್ ಕೋಡ್ ಯಾಕೆ ಹೀಗಿರುತ್ತದೆ ಎಂಬುದಕ್ಕೆ ಅವರು ಉತ್ತರ ನೀಡಿದ್ದಾರೆ.

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಒಳಗೊಂಡ ರಾಪಿಡ್ ಫಯರ್ ಪ್ರಶ್ನೋತ್ತರಾವಳಿಯಲ್ಲಿ ರಾಹುಲ್ ಗಾಂಧಿಗೆ ನೀವು ಯಾಕೆ ಯಾವತ್ತೂ ಬರೀ ಬಿಳಿ ಬಣ್ಣದ ಟಿ ಶರ್ಟ್ ತೊಟ್ಟುಕೊಂಡು ಸಿಂಪಲ್ ಆಗಿರುತ್ತೀರಿ ಎಂದು ಪ್ರಶ್ನೆ ಕೇಳಲಾಯಿತು.

ಇದಕ್ಕೆ ಉತ್ತರಿಸಿದ ಅವರು ನನಗೆ ಸಿಂಪಲ್ ಆಗಿರಲು ಇಷ್ಟ. ಬಿಳಿ ಬಣ್ಣ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ನನಗೆ ಬಟ್ಟೆ ಯಾವುದು ಎಂಬುದು ಮುಖ್ಯವಲ್ಲ’ ಎಂದಿದ್ದಾರೆ. ಇನ್ನು ಮಲ್ಲಿಕಾರ್ಜುನ ಖರ್ಗೆಗೆ ಈ ಚುನಾಣೆ ಪ್ರಚಾರ ಸಂದರ್ಭದಲ್ಲಿ ಯಾವುದು ಉತ್ತಮ ಮತ್ತು ಏನು ಕೆಟ್ಟದ್ದು ಎನಿಸಿತು ಎಂದು ಪ್ರಶ್ನೆ ಕೇಳಿದಾಗ ಕೆಟ್ಟದ್ದು ಎಂದು ಏನೂ ಇಲ್ಲ. ನಾವು ಈ ದೇಶಕ್ಕೋಸ್ಕರ ಕೆಲಸ ಮಾಡುತ್ತಿದ್ದೇವೆ ಎಂಬುದು ಉತ್ತಮ ವಿಚಾರ. ಈ ದೇಶವನ್ನು ಹಾಳು ಮಾಡುತ್ತಿರುವವರ ವಿರುದ್ಧ ಹೋರಾಡುತ್ತಿದ್ದೇವೆ. ನಮಗೆ ಪಕ್ಷಕ್ಕಿಂತ ಸಿದ್ಧಾಂತ ಮುಖ್ಯ. ಸೋಲು ಗೆಲುವು, ಬರುತ್ತದೆ ಹೋಗುತ್ತದೆ, ಆದರೆ ಕೊನೆಗೆ ನಮ್ಮ ಸಿದ್ಧಾಂತ್ ಉಳಿಸುವುದು ಮುಖ್ಯ ಎಂದಿದ್ದಾರೆ.

ಇದಕ್ಕೆ ರಾಹುಲ್ ಗಾಂಧಿಯೂ ತಲೆದೂಗಿದ್ದಾರೆ. ಎಲ್ಲಕ್ಕಿಂತ ಸಿದ್ದಾಂತ ಮುಖ್ಯ ಎನ್ನುವ ಖರ್ಗೆಯವರು ಮತ್ತು ಸಿದ್ದರಾಮಯ್ಯನವರ ಮಾತಿಗೆ ನಾನು ಒಪ್ಪುತ್ತೇನೆ. ಎಷ್ಟೇ ದೊಡ್ಡ ಸಂಘಟನೆಯಾದರೂ ಸಿದ್ಧಾಂತವಿಲ್ಲದೇ ಯಶಸ್ಸು ಕಾಣಲು ಸಾಧ‍್ಯವಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ ರಾಜ್ಯದಲ್ಲಿ ಮಳೆ ಬರುವ ಹಾಗಿದೆ: ಎಲ್ಲೆಲ್ಲಿ ಮಳೆಯಾಗಲಿದೆ ಇಲ್ಲಿದೆ ಡೀಟೈಲ್ಸ್