Select Your Language

Notifications

webdunia
webdunia
webdunia
webdunia

ದೆಹಲಿಯ ಶ್ರದ್ಧಾ ವಾಲ್ಕರ್ ಳನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟಿದ್ದ ಹಂತಕ ಅಫ್ತಾಬ್ ಈಗ ಎಲ್ಲಿದ್ದಾನೆ

Shraddha Walker-Aftab Poonawala

Krishnaveni K

ನವದೆಹಲಿ , ಬುಧವಾರ, 8 ಮೇ 2024 (12:10 IST)
ನವದೆಹಲಿ: ಕಳೆದ ವರ್ಷ ಅತೀ ಹೆಚ್ಚು ಸದ್ದು ಮಾಡಿದ ಕ್ರೈಂ ಪ್ರಕರಣಗಳಲ್ಲಿ ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣವೂ ಒಂದು. ಆಕೆಯ ಪ್ರಿಯಕರನೇ ಆಕೆಯನ್ನು ಹತ್ಯೆ ಮಾಡಿ ಪೀಸ್ ಪೀಸ್ ಮಾಡಿ ಫ್ರಿಡ್ಜ್ ನಲ್ಲಿ ತುಂಬಿಟ್ಟು ಬಳಿಕ ಒಂದೊಂದೇ ಬಾಡಿ ಪಾರ್ಟ್ ನ್ನು ಬಿಸಾಕುತ್ತಿದ್ದ.
 

ಈ ಬೆಚ್ಚಿ ಬೀಳಿಸುವ ಘಟನೆ ಇಡೀ ದೇಶದಲ್ಲೇ ತಲ್ಲಣವುಂಟು ಮಾಡಿತ್ತು. ಈ ಸಂಬಂಧ ಆರೋಪಿ ಅಫ್ತಾಬ್ ಅಮಿನ್ ಪೂನವಾಲಾನನ್ನು ಪೊಲೀಸರು ಬಂಧಿಸಿದ್ದರು. ಶ್ರದ್ಧಾ ಜೊತೆಗೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ಆತ ಕೊನೆಗೆ ಆಕೆಯ ಮೇಲೆ ಸಂಶಯಪಟ್ಟು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ.

ಬಳಿಕ ಮೃತದೇಹವನ್ನು ಪೀಸ್ ಪೀಸ್ ಮಾಡಿ ಮನೆಯಲ್ಲಿಯೇ 15 ದಿನಗಳ ಕಾಲ ಇಟ್ಟುಕೊಂಡಿದ್ದ. ಪ್ರತಿನಿತ್ಯ ಯಾರಿಗೂ ಸಂಶಯ ಬಾರದಂತೆ ಒಂದೊಂದೇ ಪೀಸ್ ನ್ನು ದೆಹಲಿಯ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬಿಸಾಕಿ ಬರುತ್ತಿದ್ದ. ಈ ಘಟನೆ ಬೆಳಕಿಗೆ ಬೆನ್ನಲ್ಲೇ ಪೊಲೀಸರು ಆತನನ್ನು ಬಂಧಿಸಿದ್ದರು.

ಕೊಲೆಯಾಗಿದ್ದ ಯುವತಿ ಹಿಂದೂ ಮತ್ತು ಕೊಲೆ ಮಾಡಿದಾತ ಮುಸ್ಲಿಂ ಧರ್ಮಕ್ಕೆ ಸೇರಿದವನಾಗಿದ್ದ. ಹೀಗಾಗಿ ಈ ಕೊಲೆ ಪ್ರಕರಣ ಮತ್ತಷ್ಟು ದೊಡ್ಡ ಸುದ್ದಿಯಾಗಿತ್ತು. ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಎಲ್ಲಾ ಘಟನೆಯಂತೇ ಇದೀಗ ಈ ಪ್ರಕರಣವೂ ತೆರೆಮರೆಗೆ ಸರಿಯುತ್ತಿದೆ.

ಆದರೆ ಹಂತಕ ಅಫ್ತಾಬ್ ಈಗ ಎಲ್ಲಿದ್ದಾನೆ? ಈ ಕೇಸ್ ಎಲ್ಲಿಯವರೆಗೆ ಬಂದಿದೆ ಎಂದು ಗೊತ್ತಾ? ಹಂತಕ ಅಫ್ತಾಬ್ ಈಗಲೂ  ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಒಂಟಿ ಕೋಣೆಯಲ್ಲಿ ಆತ ಜೈಲಿನಲ್ಲಿ ತನ್ನ ದಿನ ಕಳೆಯುತ್ತಿದ್ದಾನೆ. ತೀರಾ ಇತ್ತೀಚೆಗಷ್ಟೇ ಆತನ ವಕೀಲರ ಮನವಿ ಮೇರೆಗೆ ಕೋರ್ಟ್ ಹಗಲು 8 ಗಂಟೆ ಹೊತ್ತು ಜೈಲಿನಲ್ಲಿ ಓಡಾಡಿಕೊಂಡಿರಲು ಅವಕಾಶ ನೀಡಲಾಗಿದೆ. ರಾತ್ರಿಯಿಡೀ ಮತ್ತೆ ಆತನನ್ನು ಒಂಟಿ ಸೆಲ್ ನಲ್ಲಿ ಕೂಡಿ ಹಾಕಲಾಗುತ್ತಿದೆ.  ಜೈಲಿನಲ್ಲಿ ಇದುವರೆಗೆ ಆತ ಶಾಂತ ರೀತಿಯಲ್ಲೇ ವರ್ತಿಸಿದ್ದಾನೆ ಎಂಬ ಕಾರಣಕ್ಕೆ ಆತನಿಗೆ ಈ ಅವಕಾಶ ನೀಡಲಾಗಿದೆ. ದೆಹಲಿ ಪೊಲೀಸರು ಆತನ ವಿರುದ್ಧ 6,629  ಪುಟಗಳ ಸುದೀರ್ಘ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ ಡಿ ರೇವಣ್ಣಗೆ ಅನಾರೋಗ್ಯ: ಎರಡೆರಡು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ ಎಸ್ಐಟಿ ಟೀಂ