Select Your Language

Notifications

webdunia
webdunia
webdunia
webdunia

ಅನಂತ್ ಅಂಬಾನಿ ಮದುವೆಗೆ ಬಂದು ಸ್ಟಾರ್ ಗಳು ಪುಕ್ಸಟೆ ಕುಣಿಯಲ್ವಂತೆ

Anant Ambani wedding

Krishnaveni K

ಮುಂಬೈ , ಸೋಮವಾರ, 15 ಜುಲೈ 2024 (12:12 IST)
ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅದ್ಧೂರಿ ಮದುವೆಗೆ ದೇಶ-ವಿದೇಶದ ಅನೇಕ ಸೆಲೆಬ್ರಿಟಿಗಳು ಬಂದು ನಮ್ಮದೇ ಮನೆ ಮದುವೆಯೇನೋ ಎಂಬಂತೆ ಕುಣಿದು ಕುಪ್ಪಳಿಸಿದ್ದಾರೆ.

ತಮ್ಮ ತಾರಾ ವರ್ಚಸ್ಸುಗಳು ಏನೇ ಇದ್ದರೂ ಇವರೆಲ್ಲಾ ಅಂಬಾನಿ ಮನೆ ಮದುವೆಯಲ್ಲಿ ಸೈಡ್ ಆಕ್ಟರ್ ಗಳಂತಿದ್ದರು. ಸೂಪರ್ ಸ್ಟಾರ್ ರಜನೀಕಾಂತ್ ರಿಂದ ಹಿಡಿದು ಸಲ್ಮಾನ್ ಖಾನ್, ಶಾರುಖ್ ಖಾನ್, ಅಮಿತಾಭ್ ಬಚ್ಚನ್ ಸೇರಿದಂತೆ ಎಲ್ಲಾ ಕಲಾವಿದರೂ ಡ್ಯಾನ್ಸ್ ಮಾಡಿದ್ದಾರೆ.

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅಂತೂ ಮದುಮಗನ ದಿಬ್ಬಣ ತಡೆಯುವ ತಮಾಷೆಯ ಪ್ರಸಂಗದಲ್ಲಿ ನೆಲದ ಮೇಲೆ ಬೋರಲಾಗಿ ಮಲಗಿಕೊಂಡು ಫನ್ ಮಾಡಿದ್ದಾರೆ. ತಮ್ಮ ವೃತ್ತಿಯಲ್ಲಿ ಖ್ಯಾತರಾಗಿ ಕೋಟಿ ಕೋಟಿ ಸಂಭಾವನೆ ಪಡೆಯುವ ಇವರೆಲ್ಲಾ ಇಲ್ಲಿ ಇದನ್ನೆಲ್ಲಾ ಪಕ್ಕಕ್ಕಿಟ್ಟು ಈ ಪಾಟಿ ಡ್ಯಾನ್ಸ್ ಮಾಡುತ್ತಿರುವುದು ಯಾಕೆ ಎಂದು ಎಲ್ಲರಿಗೂ ಅಚ್ಚರಿಯಾಗಬಹುದು.

ಈ ಸಂದರ್ಭದಲ್ಲಿ ಇನ್ನೊಂದು ಸುದ್ದಿ ಹರಿದಾಡುತ್ತಿದೆ. ಈ ತಾರೆಯರು ಯಾರೂ ಪುಕ್ಸಟೆ ಬಂದು ಅಂಬಾನಿ ಮದುವೆಯಲ್ಲಿ ಕುಣಿದಿಲ್ಲ. ಎಲ್ಲರಿಗೂ ಲಕ್ಷ-ಕೋಟಿಗಟ್ಟಲೆ ಮೌಲ್ಯದ ಉಡುಗೊರೆ, ಸಂಭಾವನೆ ನೀಡಿ ಕರೆಸಿಕೊಳ್ಳಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಗೆ 2 ಕೋಟಿ ಬೆಲೆಯ ಕೈಗಡಿಯಾರವೊಂದು ಗಿಫ್ಟ್ ಸಿಕ್ಕಿದೆ ಎಂಬ ವದಂತಿಯೂ ಇದೆ. ಇದು ಎಷ್ಟು ನಿಜ, ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ ಈ ತಾರೆಯರೆಲ್ಲಾ ಈ ಪಾಟಿ ತಮ್ಮ ಸ್ಟಾರ್ ಗಿರಿ ಪಕ್ಕಕ್ಕಿಟ್ಟು ಕುಣಿಯುವುದರ ಹಿಂದೆ ಸಂಭಾವನೆಯ ಜಾದೂ ಇದೆ ಎಂಬ ಗುಸು ಗುಸು ಜೋರಾಗಿಯೇ ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ದಿಲ್ಲದೇ ಬಂದು ಕೊರಗಜ್ಜನ ಕೋಲ ನೋಡಲು ಬಂದ ಕತ್ರಿನಾ ಕೈಫ್, ಕೆಎಲ್ ರಾಹುಲ್