ಲಂಡನ್: ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳೊಂದಿಗೆ ಲಂಡನ್ ನಲ್ಲಿರುವ ವಿರಾಟ್ ಕೊಹ್ಲಿ ಈಗ ಎಲ್ಲಾ ಬಿಟ್ಟು ಸಂಪೂರ್ಣವಾಗಿ ಭಕ್ತಿ ಭಾವದಿಂದ ಭಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಖ್ಯಾತ ಭಜನೆ ಗಾಯಕ ಕೃಷ್ಣ ದಾಸ್ ಅವರ ಭಜನೆ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮ ಯೂನಿಯನ್ ಚಾಪೆಲ್ ನಲ್ಲಿ ನಡೆದಿತ್ತು. ಕೃಷ್ಣದಾಸ್ ಖ್ಯಾತ ಭಜನೆ ಹಾಡುಗಾರರಾಗಿದ್ದು ಅವರ ಕಾರ್ಯಕ್ರಮಕ್ಕೆ ಈ ಮೊದಲೂ ಕೊಹ್ಲಿ ದಂಪತಿ ಹಾಜರಾಗಿದ್ದರು.
ಈ ಹಿಂದೆಯೂ ಲಂಡನ್ ನಲ್ಲಿ ಕೃಷ್ಣ ದಾಸ್ ಅವರ ಭಜನೆ ಕಾರ್ಯಕ್ರಮದಲ್ಲಿ ಕೊಹ್ಲಿ ಭಾಗಿಯಾಗಿದ್ದ ಫೋಟೋಗಳು ವೈರಲ್ ಆಗಿತ್ತು. ಕೃಷ್ಣ ದಾಸ್ ಭಜನೆಗಳ ದೊಡ್ಡ ಅಭಿಮಾನಿಗಳು ಎನ್ನಲಾಗಿದೆ. ಇದೀಗ ಕೊಹ್ಲಿ ದಂಪತಿ ಸಾಮಾನ್ಯರಂತೇ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಬಳಿಕ ಕ್ರಿಕೆಟ್ ನಿಂದ ಬಿಡುವು ಪಡೆದಿದ್ದಾರೆ. ಕೆಲವು ದಿನಗಳ ಬ್ರೇಕ್ ನಲ್ಲಿ ಲಂಡನ್ ನಲ್ಲಿ ಪತ್ನಿ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಕೊಹ್ಲಿ ದಂಪತಿ ಮುಂದೆ ಲಂಡನ್ ನಲ್ಲಿಯೇ ನೆಲೆಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.