Select Your Language

Notifications

webdunia
webdunia
webdunia
webdunia

2011 ರಲ್ಲಿ ಧೋನಿ ವಿಶ್ವಕಪ್ ಫೈನಲ್ ನಲ್ಲಿ ಸಿಕ್ಸರ್ ಸಿಡಿಸಿದ ಬ್ಯಾಟ್ ನ್ನು ಏನು ಮಾಡಿದ್ದಾರೆ ಗೊತ್ತಾ

Dhoni sixer

Krishnaveni K

ರಾಂಚಿ , ಶುಕ್ರವಾರ, 26 ಜುಲೈ 2024 (09:03 IST)
ರಾಂಚಿ: 2011 ರ ಏಕದಿನ ವಿಶ್ವಕಪ್ ನಲ್ಲಿ ಭಾರತದ ಗೆಲುವನ್ನು ಯಾವ ಕ್ರಿಕೆಟ್ ಪ್ರೇಮಿಗಳೂ ಮರೆಯಲು ಸಾಧ್ಯವಿಲ್ಲ. ಈ ವಿಶ್ವಕಪ್ ಫೈನಲ್ ನಲ್ಲಿ ಧೋನಿ ಸಿಕ್ಸರ್ ಕೂಡಾ ಅವಿಸ್ಮರಣೀಯ. ಈಗ ಆ ಬ್ಯಾಟ್ ಎಲ್ಲಿದೆ ಗೊತ್ತಾ?

2011 ರ ಏಕದಿನ ವಿಶ್ವಕಪ್ ನಲ್ಲಿ ಧೋನಿ ಮತ್ತು ಗೌತಮ್ ಗಂಭೀರ್ ಭರ್ಜರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಧಾರವಾದರು. ಧೋನಿ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಮುಂಬಡ್ತಿ ಪಡೆದು ಆಡಲಿಳಿದಿದ್ದರು. ಶ್ರೀಲಂಕಾ ವಿರುದ್ಧ ಧೋನಿ ಅಜೇಯ 91 ರನ್ ಸಿಡಿಸಿದ್ದರು. ಅದರಲ್ಲೂ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗೆಲುವು ತಂದುಕೊಟ್ಟಿದ್ದರು.

ಈ ಸಿಕ್ಸರ್ ಬಾರಿಸಿದ ಬ್ಯಾಟ್ ನ್ನು ಧೋನಿ ಏನು ಮಾಡಿದ್ದಾರೆ ಎಂದು ತಿಳಿದರೆ ನಿಮಗೂ ಹೆಮ್ಮೆಯಾದೀತು. ಧೋನಿ ಅಂದು ಬಳಸಿದ್ದ ಆ ಬ್ಯಾಟ್ ನ್ನು ಹರಾಜಿಗಿಟ್ಟಿದ್ದರು. ಇದನ್ನು ಮುಂಬೈ ಮೂಲದ ಆರ್ ಕೆ ಗ್ಲೋಬಲ್ ಸಂಸ್ಥೆ ಬರೋಬ್ಬರಿ 72 ಲಕ್ಷ ರೂ.ಗೆ ಖರೀದಿ ಮಾಡಿತ್ತು.

ಆ ಹಣದಲ್ಲಿ ಧೋನಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಇದು ವಿಶ್ವದ ಅತ್ಯಂತ ದುಬಾರಿ ಬ್ಯಾಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೆ ಆ ಬ್ಯಾಟ್ ಹರಾಜಿಗೆ ಹಾಕಿ ಬಂದ ಹಣದಿಂದ ಬಡ ಮಕ್ಕಳಿಗೆ ನೆರವಾಗಿದೆ ಎನ್ನುವುದು ಇನ್ನಷ್ಟು ಹೆಮ್ಮೆಯ ಸಂಗತಿಯಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ.. ರಾಹುಲ್ ದ್ರಾವಿಡ್ ಗೆ ಎಂಥಾ ಬೇಡಿಕೆ: ಐಪಿಎಲ್ 2025 ಕೋಚ್ ಆಗಲು ಯಾವೆಲ್ಲಾ ತಂಡಗಳಿಂದ ಆಫರ್ ನೋಡಿ