ಬೆಂಗಳೂರು: ಕನ್ನಡಿಗ ಕೆಎಲ್ ರಾಹುಲ್ ಅವರ ಅಬ್ಬರದ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿ ವಿರುದ್ಧ 6 ವಿಕೆಟ್ಸ್‌ನಿಂದ ಗೆದ್ದಿದೆ. ಈ ಮೂಲಕ ತವರಿನ ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಆದರೆ ಕನ್ನಡಿಗನ ಆಟ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.
ಇನ್ನೂ ಆರ್‌ಸಿಬಿ ವಿರುದ್ಧ ಗೆಲವು ಸಾಧಿಸುತ್ತಿದ್ದ ಹಾಗೇ ರಾಹುಲ್ ಕ್ರೀಡಾಂಗಣವನ್ನು ತೋರಿಸಿ, ನನ್ನದು ಎಂದು ಹೇಳಿ, ತಮ್ಮ ಆಕ್ರೋಶವನ್ನು ಹೊರಹಾಕಿದರು. ಕಳೆದ ಕೆಲ ವರ್ಷಗಳಿಂದ ಕೆಎಲ್ ರಾಹುಲ್ ಅವರು ತವರಿನ ತಂಡದಲ್ಲಿ ಆಡಬೇಕೆಂಬುದು ಅಭಿಮಾನಿಗಳ ಆಸೆ. ಆದರೆ ಕೆಎಲ್ ರಾಹುಲ್ ಅವರನ್ನು ಆರ್‌ಸಿಬಿ ಪರಾಂಚೈಸಿ ಖರೀದಿಸುವಲ್ಲಿ ನಿರಾಸೆ ತೋರಿಸುತ್ತಲೇ ಇದೆ. ಅಭಿಮಾನಿಗಳು ಮಾತ್ರ ನಮ್ಮ ಮಣ್ಣಿನ ಮಗ ಆರ್‌ಸಿಬಿಗೆ ಬರಬೇಕೆಂದು ಹೇಳುತ್ತಲೇ ಇರುತ್ತಾರೆ.
ಇದೀಗ ಆರ್‌ಸಿಬಿ ವಿರುದ್ಧ ನಡೆದ ಪಂದ್ಯಾಟದಲ್ಲಿ ಕೆಎಲ್ ರಾಹುಲ್ ಇದಕ್ಕೆ ತಕ್ಕೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಆರ್‌ಸಿಬಿ ವಿರುದ್ಧ ಇಂದಿನ ಐಪಿಎಲ್ ಪಂದ್ಯಾಟದಲ್ಲಿ ಡೆಲ್ಲಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೂ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ.
ಡಿಸಿ ನಾಯಕ ಅಕ್ಷರ್ ಪಟೇಲ್ ಆರ್‌ಸಿಬಿ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಆರಂಭ ಮಾಡಿದ ಆರ್‌ಸಿಬಿ ಸಾಲ್ಟ್, ಪಡಿಕ್ಕಲ್, ಕೊಹ್ಲಿ ಔಟ್ ಆಗುತ್ತಿದ್ದ ಹಾಗೇ ಮತ್ತೆ ಉತ್ತಮ ಪ್ರದರ್ಶನ ನೀಡಲು ವಿಫಲವಾಯಿತು. 20 ಓವರ್‌ಗಳಲ್ಲಿ 7ವಿಕೆಟ್ ಕಳೆದುಕೊಂಡು 163 ರನ್ ಗಳಿಸಿ, ಡೆಲ್ಲಿಗೆ 164ರನ್‌ಗಳ ಗೆಲುವಿನ ಟಾರ್ಗೆಟ್ ನೀಡಿತು.
ರಜತ್ ಪಾಟಿದಾರ್ ನಾಯಕತ್ವದಲ್ಲಿ, ಆರ್‌ಸಿಬಿ ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾ ವಿರುದ್ಧ ತಮ್ಮ ವಿದೇಶ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಗುಜರಾತ್ ಟೈಟಾನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತವರಿನಲ್ಲಿ ನಡೆದ ಎರಡು ಪಂದ್ಯಾಟದಲ್ಲೂ ಆರ್‌ಸಿಬಿ ಸೋಲು ಅನುಭವಿಸಿದೆ.