ಬೆಂಗಳೂರು: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲ್ಲಿಸಿದ ಕೆಎಲ್ ರಾಹುಲ್ ಹಿಂದೆಂದೂ ಇಲ್ಲದಂತಹ ಆಕ್ರಮಣಕಾರೀ ಸೆಲೆಬ್ರೇಷನ್ ಮಾಡಿದ್ದಾರೆ. ಅವರ ಸೆಲೆಬ್ರೇಷನ್ ಹಿಂದಿದೆ ಒಂದು ಪ್ರಮುಖ ಕಾರಣ. ಅದೇನೆಂದು ಈಗ ವಿಡಿಯೋ ಸಮೇತ ಬಹಿರಂಗವಾಗಿದೆ.
ಕೆಎಲ್ ರಾಹುಲ್ ನಿನ್ನೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದಿದ್ದರು. 53 ಎಸೆತಗಳಲ್ಲಿ ಅಜೇಯ 93 ರನ್ ಗಳಿಸಿ ತಂಡಕ್ಕೆ ಗೆಲುವು ಕೊಡಿಸಿದ ನಂತರ ರಾಹುಲ್ ಬ್ಯಾಟ್ ನೆಲಕ್ಕೆ ಕುಕ್ಕಿ ಎದೆ ತಟ್ಟಿಕೊಂಡು ಇದು ನನ್ನ ಮೈದಾನ ಎಂದು ತೋರಿಸಿದ್ದಾರೆ.
ರಾಹುಲ್ ಎಷ್ಟೇ ದೊಡ್ಡ ಗೆಲುವು, ಸಾಧನೆ ಮಾಡಿದರೂ ಈ ರೀತಿ ಆಕ್ರಮಣಕಾರಿಯಾಗಿ ಮೈದಾನದಲ್ಲಿ ವರ್ತಿಸಿದವರೇ ಅಲ್ಲ. ಇಂದಿನ ಪಂದ್ಯದಲ್ಲಿ ಮಾತ್ರ ಅವರ ಈ ವರ್ತನೆ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಇದಕ್ಕೆ ಕಾರಣವೂ ಇದೆ.
ಇದಕ್ಕೆ ಮೊದಲು ಡೆಲ್ಲಿ ತಂಡದ ವಿಕೆಟ್ ಒಂದು ಬಿದ್ದಾಗ ವಿರಾಟ್ ಕೊಹ್ಲಿ ಬೇಕೆಂದೇ ರಾಹುಲ್ ಎದುರೇ ಸಂಭ್ರಮಿಸುತ್ತಾ ಕೆಣಕಿದ್ದರು. ಅದನ್ನು ಸುಮ್ಮನೇ ನೋಡುತ್ತಾ ನಿಂತಿದ್ದ ರಾಹುಲ್ ಪಂದ್ಯ ಗೆಲ್ಲಿಸಿದ ನಂತರ ಇದು ನನ್ನ ಗ್ರೌಂಡ್, ನನ್ನ ಏರಿಯಾ ಎಂದು ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.