ಬೆಂಗಳೂರು: ಐಪಿಎಲ್ 2025 ರಲ್ಲಿ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ಸೋತ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಸೋಲಿಗೆ ಸಿಎಂ ಸಿದ್ದರಾಮಯ್ಯನೇ ಕಾರಣ ಅಂತಿದ್ದಾರೆ. ಅದು ಹೇಗೆ ಅಂತೀರಾ?
ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯ ವೀಕ್ಷಣೆ ಸಿಎಂ ಸಿದ್ದರಾಮಯ್ಯ ಕೂಡಾ ಬಂದಿದ್ದರು. ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ವಿಐಪಿ ಸೀಟ್ ನಲ್ಲಿ ಕುಳಿತು ಸಿದ್ದರಾಮಯ್ಯ ಐಪಿಎಲ್ ಪಂದ್ಯ ವೀಕ್ಷಣೆ ಮಾಡಿದ್ದಾರೆ.
ಈ ವಿಡಿಯೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು, ಪ್ರೇಕ್ಷಕರ ಜೊತೆ ಸೇರಿ ಆರ್ ಸಿಬಿ ಪಂದ್ಯ ವೀಕ್ಷಿಸಿ ಅವರಿಗೆ ಪ್ರೋತ್ಸಾಹಿಸಿದೆ. ಆರ್ ಸಿಬಿ ಒಂದು ಸಮತೋಲಿತ ತಂಡವಾಗಿದ್ದು, ಈ ಬಾರಿ ಕಪ್ ಗೆಲ್ಲಬಹುದು ಎಂಬ ವಿಶ್ವಾಸವಿದೆ ಎಂದು ಬರೆದುಕೊಂಡಿದ್ದರು.
ನಿನ್ನೆ ಸೋಲಿನ ಬಳಿಕ ಹಲವರು ಸಿಎಂ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು ಈಗ ಗೊತ್ತಾಯ್ತು ಆರ್ ಸಿಬಿ ಯಾಕೆ ಸೋತಿದ್ದು ಅಂತ ಎಂದು ಕಿಡಿ ಕಾರಿದ್ದಾರೆ. ಸ್ವಾಮಿ ನೀವು ಯಾಕೆ ಹೋದ್ರಿ ಅದಕ್ಕೇ ಮ್ಯಾಚ್ ಸೋತೆವು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಪ್ರಧಾನಿ ಮೋದಿ ಹೋಗಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಬೆಂಬಲಿಗರು ಮೋದಿ ಅದೃಷ್ಟಹೀನ. ಅದಕ್ಕೇ ಪಂದ್ಯ ಸೋತೆವು ಎಂದಿದ್ದರು. ಇದೀಗ ಅದನ್ನೇ ಕೆಲವರು ಸಿದ್ದರಾಮಯ್ಯಗೆ ತಿರುಗುಬಾಣ ಮಾಡಿದ್ದಾರೆ.