ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಲವು ಉತ್ಪನ್ನಗಳಿಗೆ ರಾಯಭಾರಿಯಾಗುವ ಮೂಲಕ ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಾರೆ. ಆದರೆ ಇದೀಗ ಪ್ಯೂಮಾ ಸಂಸ್ಥೆ 300 ಕೋಟಿ ರೂ. ಕೊಡುತ್ತೇವೆ ಎಂದರೂ ಕೊಹ್ಲಿ ರಿಜೆಕ್ಟ್ ಮಾಡಿದ್ದಾರಂತೆ. ಅದಕ್ಕೆ ಕಾರಣವೂ ಇದೆ.
ವಿರಾಟ್ ಕೊಹ್ಲಿ ಈಗಗಲೇ ಪ್ಯೂಮಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. 2017 ರಲ್ಲಿ ಬರೋಬ್ಬರಿ 110 ಕೋಟಿ ರೂ.ಗಳಿಗೆ ಕೊಹ್ಲಿ ಪ್ಯೂಮಾ ಉತ್ಪನ್ನದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಆ ಒಪ್ಪಂದ ಕೊನೆಯಾಗುತ್ತದೆ.
ಕೊಹ್ಲಿ ಜೊತೆಗೆ ಮತ್ತೆ ಹೊಸದಾಗಿ ಒಪ್ಪಂದ ಮಾಡಿಕೊಳ್ಳಲು ಕಂಪನಿಯೂ ತಯಾರಾಗಿದೆ. ಇದಕ್ಕೆ 300 ಕೋಟಿ ರೂ. ನೀಡಲು ಪ್ಯೂಮಾ ಮುಂದಾಗಿದೆ. ಆದರೆ ಕೊಹ್ಲಿ ಮಾತ್ರ ಈ ಆಫರ್ ತಿರಸ್ಕರಿಸಿದ್ದಾರೆ ಎನ್ನುತ್ತಿವೆ ಮೂಲಗಳು. ಇದಕ್ಕೆ ಕಾರಣವೂ ಇದೆ.
ವಿರಾಟ್ ಕೊಹ್ಲಿ ಈಗ ತಮ್ಮದೇ ಬ್ರ್ಯಾಂಡ್ ಒನ್-8 ಪ್ರಮೋಟ್ ಮಾಡಲು ಹೊರಟಿದ್ದಾರೆ. ಈಗಾಗಲೇ ಈ ಹೆಸರಿನಲ್ಲಿ ರೆಸ್ಟೋರೆಂಟ್, ಜೀವನಶೈಲಿಯ ಉತ್ಪನ್ನಗಳನ್ನು ಹೊರತಂದಿದ್ದಾರೆ. ಇದೀಗ ತಮ್ಮದೇ ಉತ್ಪನ್ನವನ್ನು ಪ್ರಚುರಪಡಿಸಲು ಬಯಸಿರುವ ಕೊಹ್ಲಿ ಪ್ಯೂಮಾ ಉತ್ಪನ್ನದ ಒಪ್ಪಂದವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.