Select Your Language

Notifications

webdunia
webdunia
webdunia
webdunia

IPL 2025: RCB ಅಭಿಮಾನಿಗಳಿಗೆ ನಾಳೆ ಖುಷಿಯ ದಿನ, ಯಾಕೆ ಗೊತ್ತಾ

ಆರ್‌ಸಿಬಿ vs ಆರ್‌ಆರ್‌ ಪಂದ್ಯ

Sampriya

ಬೆಂಗಳೂರು , ಶನಿವಾರ, 12 ಏಪ್ರಿಲ್ 2025 (16:36 IST)
Photo Courtesy X
ಬೆಂಗಳೂರು: ರಾಜಸ್ಥಾನ ರಾಯಲ್ಸ್ ತಂಡವು ಭಾನುವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಏಪ್ರಿಲ್ 13 ರ ಭಾನುವಾರದಂದು ನಡೆಯಲಿರುವ ಆರ್‌ಆರ್ vs ಆರ್‌ಸಿಬಿ ಐಪಿಎಲ್ 2025 ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದೆ.

ಐಪಿಎಲ್ 2025 ರಲ್ಲಿ ನಡೆದ ಐದು ಪಂದ್ಯಾಟಗಳಲ್ಲಿ ಎರಡರಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 7ನೇ ಸ್ಥಾನದಲ್ಲಿದೆ.  ಇನ್ನೂ ಆರ್‌ಸಿವಿ ನಡೆದ ಐದು ಪಂದ್ಯಾಟಗಲ್ಲಿ ಮೂರರಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ತವರಿನಲ್ಲಿ ನಡೆದ ಎರಡೂ ಪಂದ್ಯಾಟದಲ್ಲೂ ಸೋಲು ಅನುಭವಿಸಿತು. ಇದೀಗ ಮತ್ತೇ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ ಜೈಪುರದಲ್ಲಿ ಆರ್‌ಆರ್‌ ಅನ್ನು ಎದುರಿಸಲಿದೆ.

ಇನ್ನೂ ಆರ್‌ಸಿಬಿ ವಿರುದ್ಧದ ಮುಂಬರುವ ಪಂದ್ಯವು ರಾಯಲ್ಸ್‌ನ ಮೂರನೇ ತವರು ಪಂದ್ಯವಾಗಿದ್ದು, ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯವಾಗಿದೆ. ಈ ಋತುವಿನಲ್ಲಿ ರಾಜಸ್ಥಾನದ ಹಿಂದಿನ ಎರಡು ಪಂದ್ಯಗಳು ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ನಡೆದವು.

ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಕೊನೆಯ ಪಂದ್ಯ ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2024 ಎಲಿಮಿನೇಟರ್ ಆಗಿತ್ತು. ರಾಯಲ್ಸ್ ತಂಡವು ನಾಲ್ಕು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್‌ನಿಂದ ಆಲ್‌ರೌಂಡರ್‌ ಹೊರಕ್ಕೆ