Publish Date: Fri, 11 Apr 2025 (17:13 IST)
Updated Date: Fri, 11 Apr 2025 (17:22 IST)
ಕ್ರಿಕೆಟ್ ಇಷ್ಟಪಡುವ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ತಮ್ಮ ನೆಚ್ಚಿನ ತಂಡ ಆರ್ಸಿಬಿ ಬಗ್ಗೆ ಗುಣಗಾನ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರ್ಸಿಬಿ ಅಂದ್ರೆನೆ ಜೋಶ್, ಒಂದು ಉತ್ಸಾಹ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಐಪಿಎಲ್ ಪ್ರಾರಂಭವಾಗಿ ಇದೀಗ ಹದಿನೆಂಟು ವರ್ಷ. ಈ 18 ವರ್ಷಗಳಲ್ಲಿ ಆರ್ಸಿಬಿ ಹೇಗೇ ಆಡಲಿ ನಾವು ಅವರಿಗೆ ಬೆಂಬಲಿಸಿದ್ದೇವೆ. ಆರ್ಸಿಬಿ ಅಂದ್ರೆನೆ ಒಮದು ಜೋಶ್, ಒಂದು ಉತ್ಸಾಹ. ಅದೇನೋ ಗೊತ್ತಿಲ್ಲ ಆರ್ಸಿಬಿ ಎಂದರೆ ನಮಗೆ ಜೀವ, ನಮ್ಮ ಪ್ರಾಣ ಎಂದಿದ್ದಾರೆ.
ಬೆಂಗಳೂರನ್ನು, ನಮ್ಮ ಭಾಷೆ, ನಮ್ಮ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತದೆ. ಮತ್ತೆ ಆರ್ಸಿಬಿಯವರು ಯಾವಾಗ ಆಡಿದರೂ ಒಂದು ಜೋಶ್ನಲ್ಲಿ ಆಡುತ್ತಾರೆ.
ಇದೀಗ 18ನೇ ಆವೃತ್ತಿಯ ಐಪಿಎಲ್ನಲ್ಲಿ ನಾನು ಆರ್ಸಿಬಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.