ಮುಂಬೈ: ಐಪಿಎಲ್ 2025 ರಲ್ಲಿ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಹಣಾಹಣಿಯ ನಡುವೆ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಡೆಲ್ಲಿ ದಾಂಡಿಗ ಕರುಣ್ ನಾಯರ್ ನಡುವೆ ಕಿತ್ತಾಟವಾಗಿದೆ. ಆದರೆ ಇಬ್ಬರೂ ಕಿತ್ತಾಡುವಾಗ ರೋಹಿತ್ ಶರ್ಮಾ ರಿಯಾಕ್ಷನ್ ಮಾತ್ರ ನೀವು ನೋಡ್ಲೇಬೇಕು.
ನಿನ್ನೆಯ ಪಂದ್ಯವನ್ನು ಮುಂಬೈ ರೋಚಕವಾಗಿ 12 ರನ್ ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಡೆಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಕರುಣ್ ನಾಯರ್ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಇನ್ನೇನು ಗೆಲುವು ದಾಖಲಿಸಿಬಿಡುತ್ತದೆ ಎನ್ನುವಂತಿತ್ತು. ಆದರೆ ತಂಡದ ಮೊತ್ತ 135 ರನ್ ಗಳಾಗಿದ್ದಾಗ ಕರುಣ್ ನಾಯರ್ ಮೂರನೆಯವರಾಗಿ ವಿಕೆಟ್ ಒಪ್ಪಿಸಿದರು. ಆದರೆ ಆಗಲೇ ಅವರು 40 ಎಸೆತಗಳಲ್ಲಿ 89 ರನ್ ಚಚ್ಚಿದ್ದರು.
ಡ್ರಿಂಕ್ಸ್ ವಿರಾಮದ ವೇಳೆ ಕರುಣ್ ಮತ್ತು ಬುಮ್ರಾ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಾಗ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ಈ ವೇಳೆ ಸ್ವಲ್ಪ ದೂರದಲ್ಲಿ ನಿಂತು ನೋಡುತ್ತಿದ್ದ ರೋಹಿತ್ ಶರ್ಮಾ ತಲೆಯಾಡಿಸುತ್ತಾ ನಗುತ್ತಾ ಫನ್ನಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.